ಕರ್ನಾಟಕ

karnataka

ETV Bharat / briefs

ಕೊರೊನಾ ಪತ್ತೆ ; ಹರಿಹರದ ಗಂಗಾನಗರ ನಿರ್ಬಂಧಿತ ವಲಯ ಎಂದು ಘೋಷಣೆ - ದಾವಣಗೆರೆ ಜಿಲ್ಲಾ ಸುದ್ದಿ

ಕೊಳಚೆ ಪ್ರದೇಶದಲ್ಲಿ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸುವಾಗ ಸೋಂಕಿತ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರು ಪರೀಕ್ಷೆ ಮಾಡಿಸಿಕೊಂಡಿದ್ದರು. ಶನಿವಾರ ಬಂದ ವರದಿಯಲ್ಲಿ ಆತನಿಗೆ ಸೋಂಕಿರುವುದು ದೃಢಪಟ್ಟಿದೆ..

Officials visit to virus infected person home
ಸೋಂಕಿತನ ಮನೆಗೆ ಅಧಿಕಾರಿಗಳ ಭೇಟಿ

By

Published : Jun 28, 2020, 8:18 PM IST

ಹರಿಹರ :ನಗರದ ಎಪಿಎಂಸಿ ಹಿಂಭಾಗದ ಗಂಗಾನಗರದ 65 ವರ್ಷದ ಕೂಲಿ ಕಾರ್ಮಿಕರೊಬ್ಬರಿಗೆ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿದೆ.

ಹಾವೇರಿ ತಾಲೂಕಿನ ದೇವರಗುಡ್ಡ ಪಿಎಚ್‌ಸಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿರುವ ತನ್ನ ಮಗಳ ಮನೆಗೆ ಕೆಲ ದಿನಗಳ ಹಿಂದೆ ಈ ವ್ಯಕ್ತಿ ಭೇಟಿ ನೀಡಿದ್ದ. ಆ ಮನೆಗೆ ಅವರ ಮಂಡ್ಯದಿಂದ ಸಂಬಂಧಿಯೊಬ್ಬರು ಕೂಡ ಬಂದಿದ್ದರು. ವಿಷಯ ತಿಳಿದು ಅಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ಹೋಮ್​​ ಕ್ವಾರಂಟೈನ್​​​​ಗೆ ಒಳಪಡುವಂತೆ ಸೂಚಿಸಿದ್ದರು. ಆದರೂ ಆತ ಇಲ್ಲಿನ ಗಂಗಾನಗರದಲ್ಲೇ ಇರುವ ಮತ್ತೊಬ್ಬ ಮಗಳ ಮನೆಗೆ ಆಗಮಿಸಿದ್ದರು.

ಕೊಳಚೆ ಪ್ರದೇಶದಲ್ಲಿ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸುವಾಗ ಸೋಂಕಿತ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರು ಪರೀಕ್ಷೆ ಮಾಡಿಸಿಕೊಂಡಿದ್ದರು. ಶನಿವಾರ ಬಂದ ವರದಿಯಲ್ಲಿ ಆತನಿಗೆ ಸೋಂಕಿರುವುದು ದೃಢಪಟ್ಟಿದೆ. ತಕ್ಷಣ ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ಆತನನ್ನು ದಾವಣಗೆರೆ ಕೋವಿಡ್-19 ಆಸ್ಪತ್ರೆಗೆ ಸಾಗಿಸಿದರು.

ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರು ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಹೋಮ್​ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಸೋಂಕಿತನ ಮತ್ತು ಆ ಪ್ರದೇಶಕ್ಕೆ ಸ್ಯಾನಿಟೈಸ್​​ ಮಾಡಲಾಗಿದೆ. ಈವರೆಗೂ ತಾಲೂಕಿನಲ್ಲಿ 17 ಪ್ರಕರಣ ಪತ್ತೆಯಾಗಿವೆ. ಆ ಪೈಕಿ ರಾಜನಹಳ್ಳಿಯ ಗರ್ಭಿಣಿಯೊಬ್ಬರು ಡಿಸ್ಚಾರ್ಜ್​​ ಆಗಿದ್ದಾರೆ.

ABOUT THE AUTHOR

...view details