ಶಿರಸಿ: ಶ್ರೀಗಂಧವನ್ನು ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳನೋರ್ವನನ್ನು ಬಂಧಿಸಿ, 40 ಕೆ.ಜಿ. ತೂಕದ ತುಂಡುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸಿದ್ದಾಪುರದ ಕಾನಗೋಡು ಸಮೀಪದ ಅರಣ್ಯದಲ್ಲಿ ನಡೆದಿದೆ.
ಶ್ರೀಗಂಧ ಕಳ್ಳಸಾಗಣೆ: ಓರ್ವನ ಬಂಧನ - ಅನಧಿಕೃತವಾಗಿ ಶ್ರೀಗಂಧದ ಸಾಗಾಟ
ಅನಧಿಕೃತವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಉಪವಿಭಾಗದ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
Arrrest
ತಾಳಗುಪ್ಪ ಮೂಲದ ಈರಪ್ಪ ನಾಯ್ಕ (52) ಬಂಧಿತ ಆರೋಪಿ. ಈತ ಅನಧಿಕೃತವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಉಪವಿಭಾಗದ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 40 ಕೆ.ಜಿ. ತೂಕದ ಸುಮಾರು ಎರಡೂವರೆ ಲಕ್ಷ ರೂ. ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.