ಶಿರಡಿ(ಮಹಾರಾಷ್ಟ್ರ):ಶಿವಸೇನೆ ಅಭ್ಯರ್ಥಿ ಸದಾಶಿವ ಲೋಖಂಡೆ ಪರ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಚಾರ ನಡೆಸುತ್ತಿದ್ದ ವೇಳೆ ಏಕಾಏಕಿ ಪ್ರಜ್ಞೆ ತಪ್ಪಿರುವ ಘಟನೆ ನಡೆದಿದೆ.
ಭಾಷಣದ ವೇಳೆ ಏಕಾಏಕಿ ಪ್ರಜ್ಞೆ ತಪ್ಪಿದ ನಿತಿನ್ ಗಡ್ಕರಿ! - ಸಚಿವ ನಿತಿನ್ ಗಡ್ಕರಿ
ಭಾಷಣ ಮಾಡುತ್ತಿದ್ದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಏಕಾಏಕಿ ಪ್ರಜ್ಞೆ ತಪ್ಪಿದ್ದು, ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಮಹಾರಾಷ್ಟ್ರದ ಶಿರಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ನಿತಿನ್ ಗಡ್ಕರಿ ಭಾಷಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಇನ್ನು ಶಿರಡಿಗೆ ಅವರು ಬರುತ್ತಲೇ ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಅದರ ಮಧ್ಯೆ ಕೂಡ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಲು ನಿತಿನ್ ಗಡ್ಕರಿ ಮುಂದಾಗಿದ್ದರು. ಇನ್ನು ಭಾಷಣದ ವೇಳೆ ಗಡ್ಕರಿ ಮೇಲಿಂದ ಮೇಲೆ ನಿಂಬೆ ಜ್ಯೂಸ್ ಸಹ ಕುಡಿದಿದ್ದಾರೆ. ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಮಾರಂಭದಿಂದ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕೂಡ ಜನರತ್ತ ಕೈ ಬೀಸಿದ್ದಾರೆ.