ನವದೆಹಲಿ: ಭಾರತದ-ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ತುಂಬಿದ್ದ ಭಾರತೀಯ ಅಭಿಮಾನಿಗಳು 'ಚೀಟರ್, ಚೀಟರ್' ಎಂದು ಹೀಯಾಳಿಸಿರುವುದಕ್ಕೆ ಕೋಪಗೊಂಡ ಕೊಹ್ಲಿ, ಉತ್ತಮವಾಗಿ ಫೀಲ್ಡ್ ಮಾಡಿದ ಸ್ಮಿತ್ರನ್ನು ಚಪ್ಪಾಳೆ ತಟ್ಟಿ ಬೆಂಬಲಿಸುವಂತೆ ಎಂದು ಸನ್ನೆ ಮಾಡಿ ತೋರಿಸಿದ್ದರು.
ಎದುರಾಳಿ ತಂಡದ ಆಟಗಾರನ ಬಗ್ಗೆ ಕೊಹ್ಲಿ ಕ್ರಿಕೆಟಿಂಗ್ ಸ್ಪಿರಿಟ್‌ಗೆ ಇಡೀ ಕ್ರಿಕೆಟ್ ಜಗತ್ತೇ ಹಾಡಿ ಹೊಗಳಿತ್ತು. ಆದ್ರೆ, ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್‌ಗೆ ಇದು ಪಥ್ಯವಾಗಿಲ್ಲ. ಕೊಹ್ಲಿ ನಡೆಯನ್ನು ಪ್ರಶ್ನಿಸಿದ ಮಾಜಿ ಆಟಗಾರ ನಿಕ್ ಕಾಂಪ್ಟನ್, ಕೊಹ್ಲಿ ಅಭಿಮಾನಿಗಳನ್ನು ತಡೆಯಬಾರದಿತ್ತು, ಸ್ಮಿತ್ ತಪ್ಪು ಮಾಡಿದ್ದಾರೆ, ಆದ್ದರಿಂದಲೇ ಅವರನ್ನು ಅಭಿಮಾನಿಗಳು 'ಚೀಟರ್ಸ್' ಎಂದಿದ್ದಾರೆ. ಅಭಿಮಾನಿಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟ್ವೀಟ್ ಮಾಡಿದ್ದರು.