ಚೆನ್ನೈ:ಐಸಿಸ್ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡಿನ ಕೊಯಂಬತ್ತೂರಿನ ಏಳು ಸ್ಥಳಗಳಲ್ಲಿ ಬುಧವಾರ ಮುಂಜಾನೆ ದಾಳಿ ನಡೆಸಿ ತಪಾಸಣೆ ನಡೆಸಿದೆ.
ತಮಿಳುನಾಡಲ್ಲಿ ಐಸಿಸ್ ಬೇರು..? ಎನ್ಐಎ ದಾಳಿಯಲ್ಲಿ ಸಿಕ್ಕವು ರಾಶಿ ರಾಶಿ ದಾಖಲೆಗಳು..! - ಹಣ ಸಂಗ್ರಹ
ಕೊಯಂಬತ್ತೂರಿನಲ್ಲಿ ನೆಲೆಸಿ ಭಾರತದ ವಿರುದ್ಧ ಉಗ್ರದಾಳಿಗೆ ಹಣ ಸಂಗ್ರಹ ಮಾಡುತ್ತಿದ್ದ ಎಂಟು ಮಂದಿಯ ಮೇಲೆ ಜೂನ್ 8ರಂದು ಕೇಸ್ ದಾಖಲಿಸಲಾಗಿತ್ತು. ಈ ನಿಟ್ಟಿನಲ್ಲಿ ಎಂಟು ಮಂದಿಯ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎನ್ಐಎ( ರಾಷ್ಟ್ರೀಯ ತನಿಖಾ ದಳ) ದಾಳಿ ನಡೆಸಿದೆ.
ಎನ್ಐಎ
ಕೊಯಂಬತ್ತೂರಿನಲ್ಲಿ ನೆಲೆಸಿ ಭಾರತದ ವಿರುದ್ಧ ಉಗ್ರದಾಳಿಗೆ ಹಣ ಸಂಗ್ರಹ ಮಾಡುತ್ತಿದ್ದ ಎಂಟು ಮಂದಿಯ ಮೇಲೆ ಜೂನ್ 8ರಂದು ಕೇಸ್ ದಾಖಲಿಸಲಾಗಿತ್ತು. ಈ ನಿಟ್ಟಿನಲ್ಲಿ ಇವರೆಲ್ಲರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎನ್ಐಎ ದಾಳಿ ನಡೆಸಿದೆ.
ದಾಳಿಯ ವೇಳೆ ಮೂರು ಲ್ಯಾಪ್ಟಾಪ್, ಮೂರು ಹಾರ್ಡ್ ಡ್ರೈವ್, ಹದಿನಾರು ಮೊಬೈಲ್ ಫೋನ್, ಎಂಟು ಸಿಮ್ ಕಾರ್ಡ್, ಎರಡು ಪೆನ್ಡ್ರೈವ್, ಐದು ಮೆಮೊರಿ ಕಾರ್ಡ್ ಹಾಗೂ ಒಂದು ಕಾರ್ಡ್ ರೀಡರ್ ಸೇರಿದಂತೆ ಒಂದಷ್ಟು ದಾಖಲೆಗಳನ್ನು ಎನ್ಐಎ ಜಪ್ತಿ ಮಾಡಿದೆ.