ಕರ್ನಾಟಕ

karnataka

ETV Bharat / briefs

ಚಂದ್ರನ ಅಂಗಳದಲ್ಲಿ ಮಳೆ? ನಾಸಾ ಆವಿಷ್ಕಾರದ ಹಿಂದಿದೆ ಇಸ್ರೋ ಸಾಧನೆ! - ಭಾರತೀಯ ಬಾಹ್ಯಾಕಾಶ ಸಂಸ್ಥೆ

2008ರಲ್ಲಿ ಇಸ್ರೋದ ಚಂದ್ರಯಾನ-1 ಉಡಾವಣೆ ಮಾಡಲಾಗಿತ್ತು. ಈ ನೌಕೆ 2018ರಲ್ಲಿ ಚಂದ್ರನ ಅಂಗಳದಲ್ಲಿ ನೀರಿನ ಅಂಶ ಇದೆ ಎನ್ನುವುದನ್ನು ಪತ್ತೆಹಚ್ಚಿತ್ತು. ಚಂದ್ರಯಾನ-1ರಿಂದಲೇ ಸದ್ಯದ ಆವಿಷ್ಕಾರ ಸಾಧ್ಯವಾಗಿದೆ ಎಂದು ನಾಸಾ, ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಧನ್ಯವಾದ ಸಲ್ಲಿಸಿದೆ.

ಚಂದ್ರ

By

Published : Jun 7, 2019, 8:59 PM IST

ವಾಷಿಂಗ್ಟನ್​: ಚಂದ್ರನ ಅಂಗಳದಲ್ಲಿ ನೀರು ಇರುವುದು ಸ್ಪಷ್ಟ ಎನ್ನುವುದನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಚಂದ್ರನಲ್ಲಿ ಮಳೆಯಾಗುತ್ತಿದೆಯೇ? ಎಂದು ಟ್ವೀಟ್ ಮಾಡಿರುವ ನಾಸಾ, ನೀರು ಪತ್ತೆಯಾಗಿರುವ ಬಗ್ಗೆ ಅಧಿಕೃತ ದಾಖಲೆಯನ್ನು ಟ್ವಿಟರ್ ವಿಡಿಯೋದಲ್ಲಿ ತೋರಿಸಿದೆ.

2008ರಲ್ಲಿ ಇಸ್ರೋದ ಚಂದ್ರಯಾನ-1 ಉಡಾವಣೆ ಮಾಡಲಾಗಿತ್ತು. ಈ ನೌಕೆ 2018ರಲ್ಲಿ ಚಂದ್ರನ ಅಂಗಳದಲ್ಲಿ ನೀರಿನ ಅಂಶ ಇದೆ ಎನ್ನುವುದನ್ನು ಪತ್ತೆ ಹಚ್ಚಿತ್ತು. ಚಂದ್ರಯಾನ-1ರಿಂದಲೇ ಸದ್ಯದ ಆವಿಷ್ಕಾರ ಸಾಧ್ಯವಾಗಿದೆ ಎಂದು ನಾಸಾ, ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಧನ್ಯವಾದ ಸಲ್ಲಿಸಿದೆ.

ನೀರಿನ ಅಂಶ ಕಂಡುಬಂದಿದ್ದರೂ ಅದರ ಪ್ರಮಾಣ ಎಷ್ಟಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಉಲ್ಕಾಪಾತದ ವೇಳೆ ನೀರು ಕಂಡುಬರುತ್ತಿದೆ ಎಂದು ನಾಸಾ ಸಂಸ್ಥೆ ಪೂರಕ ಮಾಹಿತಿಯನ್ನು ಒದಗಿಸಿದೆ.

ABOUT THE AUTHOR

...view details