ಕರ್ನಾಟಕ

karnataka

ETV Bharat / briefs

ಮೋದಿ 2.0 ಸರ್ಕಾರ: ಸಂಪುಟದಲ್ಲಿ ಕರ್ನಾಟಕ,ಪಶ್ಚಿಮ ಬಂಗಾಳ,ಒಡಿಶಾಗೆ ಹೆಚ್ಚಿನ ಚಾನ್ಸ್​?

2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದಾಗ ಈ ಸಲ ಕರ್ನಾಟಕ,ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಾಖಲಾಗಿದ್ದು, ಹೀಗಾಗಿ ಮೋದಿ ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

ನರೇಂದ್ರ ಮೋದಿಗೆ ಸನ್ಮಾನ

By

Published : May 25, 2019, 11:41 PM IST

ನವದೆಹಲಿ: ಸತತವಾಗಿ ಎರಡನೇ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ನರೇಂದ್ರ ಮೋದಿ ನೂತನ ಸರ್ಕಾರ ರಚನೆ ಮಾಡಲು ಈಗಾಗಲೇ ಹಕ್ಕು ಮಂಡನೆ ಮಾಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೋದಿ ಮೇ30 ರಂದು ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಮಂತ್ರಿ ಮಂಡಲದಲ್ಲಿ ಈ ಬಾರಿ ಪಶ್ಚಿಮ ಬಂಗಾಳ,ಒಡಿಶಾ ಹಾಗೂ ಕರ್ನಾಟಕದ ಸಂಸದರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜತೆಗೆ ಪ್ರಧಾನಿ ಅಭ್ಯರ್ಥಿ ರಾಹುಲ್​ ಗಾಂಧಿ ವಿರುದ್ಧ ಗೆದ್ದಿರುವ ಸ್ಮೃತಿ ಇರಾನಿಗೆ ಮಹತ್ವದ ಜವಾಬ್ದಾರಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮೋದಿ ಸಚಿವ ಸಂಪುಟದಲ್ಲಿ ಚಾನ್ಸ್​ ಪಡೆಯುವ ಸಾಧ್ಯತೆ ಇದೆ.

ಮೂರು ರಾಜ್ಯಗಳಿಗೆ ಹೆಚ್ಚಿನ ಆದ್ಯತೆ
2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದಾಗ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 2ರಿಂದ 18 ಸ್ಥಾನ, ಕರ್ನಾಟಕದಲ್ಲಿ 17ರಿಂದ 25 ಸ್ಥಾನ ಹಾಗೂ ಒಡಿಶಾದಲ್ಲಿ 1ರಿಂದ 8 ಹೆಚ್ಚಿಗೆ ಸೀಟುಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಈ ರಾಜ್ಯದ ಸಂಸದರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಲು ಮುಂದಾಗಬಹುದು ಎನ್ನಲಾಗಿದೆ. ಕಳೆದ ಎನ್​ಡಿಎ ಸರ್ಕಾರ 71 ಮಂತ್ರಿಗಳನ್ನ ಹೊಂದಿತ್ತು. ಇನ್ನು ಕಳೆದ ಮೋದಿ ಸಂಪುಟದಲ್ಲಿ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಸಚಿವರಿದ್ದರು. ಇದೀಗ ಅದರ ಸಂಖ್ಯೆ 4ಕ್ಕೇರುವ ಸಾಧ್ಯತೆಗಳಿದ್ದು, ಒಡಿಶಾ,ಕರ್ನಾಟಕದಲ್ಲಿ ಮೂವರು ಸಂಸದರಿಗೆ ಚಾನ್ಸ್​ ನೀಡುವ ಸಾಧ್ಯತೆ ಇದೆ.

ಕೆಲವರಿಗೆ ಕೊಕ್​
ಕಳೆದ ಮೋದಿ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಕೆಲ ಮುಖಗಳಿಗೆ ಈ ಸಲ ಕೊಕ್​ ನೀಡಿ, ಹೊಸ ಮುಖ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಲವರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸದೃಢಗೊಳಿಸುವ ಜವಾಬ್ದಾರಿ ನೀಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details