ಹೈದರಾಬಾದ್:ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ ಎಸ್ ಧೋನಿ ವಿಕೆಟ್ ಕೀಪಿಂಗ್ ಕ್ಷಮತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಶೋಯೆಬ್ ಅಖ್ತರ್, ಧೋನಿ ಕಂಪ್ಯೂಟರ್ಗಿಂತ ವೇಗವಾಗಿ ಯೋಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವುದೇ ಸಂದರ್ಭವನ್ನಾದರೂ ಕಂಪ್ಯೂಟರ್ಗಿಂತ ಧೋನಿ ಮುಂಚಿತವಾಗಿ ಕಾರ್ಯಗತಗೊಳಿಸಬಲ್ಲರು ಎಂದು ಪಾಕ್‌ನ ಖ್ಯಾತ ವೇಗಿ ಅಭಿಪ್ರಾಯಪಟ್ಟಿದ್ದಾರೆ.
ಧೋನಿಯೇ 'ಸಾರ್ವಕಾಲಿಕ ನಾಯಕ'! ಮಾಹಿ ಹೊಗಳಿದ ಕೊಹ್ಲಿ
ಕೆ.ಎಲ್.ರಾಹುಲ್ ನನ್ನ ಫೇವರೆಟ್:
ಇದೇ ವಿಡಿಯೋದಲ್ಲಿ ಅಖ್ತರ್ ತಮ್ಮ ನೆಚ್ಚಿನ ಆಟಗಾರ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಬ್ಯಾಟಿಂಗ್ ಶೈಲಿ ಹೊಂದಿದ್ದಾರೆ. ಭವಿಷ್ಯದಲ್ಲಿ ಅದ್ಭುತ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಲಿದ್ದಾರೆ. ರಾಹುಲ್ ತನಗೆ ವೈಯಕ್ತಿಕವಾಗಿ ಇಷ್ಟವಾಗುವ ಪ್ಲೇಯರ್ ಎಂದು ಅಖ್ತರ್ ಹೇಳಿದ್ದಾರೆ.
ನಾನು ಕೆ.ಎಲ್ ರಾಹುಲ್ನನ್ನು ಒಂದು ಬಾರಿ ಭೇಟಿಯಾಗಿದ್ದೆ. ತಂಡದಲ್ಲಿ ಅವಕಾಶ ಸಿಗದೇ ಇದ್ದಾಗ, ನಿನ್ನ ಎಲ್ಲ ಕೋಪಗಳನ್ನು ಟ್ರೇನಿಂಗ್ನಲ್ಲಿ ತೋರಿಸು. ಏಕಾಗ್ರತೆಯನ್ನು ಕಳೆದುಕೊಳ್ಳಬೇಡ ಎಂದು ಸಲಹೆ ನೀಡಿದ್ದೆ ಎಂದು ಅಖ್ತರ್ ವಿಡಿಯೋದಲ್ಲಿ ಹೇಳಿದ್ದಾರೆ.