ಟೌಂಟನ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧವೇ 5 ಪಡೆದು ಮಿಂಚಿರುವ ಪಾಕಿಸ್ತಾನದ ವೇಗಿ ಮಹಮ್ಮದ್ ಅಮೀರ್ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಭಯ ತರಿಸಿದ್ದಾರೆ.
ಪಾಕ್‌ಗೆ ಅಮೀರ್ ಬ್ರಹ್ಮಾಸ್ತ್ರ,ಕೊಹ್ಲಿ ಪಡೆಗೆ ಕಂಟಕವಾಗ್ತಾರಾ ಈ ಎಡಗೈ ವೇಗಿ? - ಭಾರತ
2017ರ ಚಾಂಪಿಯನ್ ಟ್ರೋಪಿ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ 6 ಓವರ್ಗಳಲ್ಲಿ 16 ರನ್ ನೀಡಿ ಕೊಹ್ಲಿ, ಧವನ್ ಹಾಗೂ ರೋಹಿತ್ ವಿಕೆಟ್ ಪಡೆದು ಮಿಂಚಿದ್ದ ಅಮೀರ್, ಪಾಕ್ ಚಾಂಪಿಯನ್ ಆಗಲು ನೆರವಾಗಿದ್ದರು.
ಎಡಗೈ ಸ್ವಿಂಗ್ ಬೌಲರ್ ಅಮೀರ್ 2019ರ ವಿಶ್ವಕಪ್ನಲ್ಲಿ ಅದ್ದೂರಿ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಿಂದ 10 ವಿಕೆಟ್ ಪಡೆದು ಮಿಂಚಿರುವ ಅಮೀರ್ ಇಂಗ್ಲೆಂಡ್ ವಿರುದ್ಧ 3 , ವೆಸ್ಟ್ ಇಂಡೀಸ್ ವಿರುದ್ಧ 2 ಹಾಗೂ ಆಸ್ಟ್ರೇಲಿಯಾ ವಿರುದ್ಧ ಭಾರತದ ವಿರುದ್ಧ 2017ರ ಚಾಂಪಿಯನ್ ಟ್ರೋಫಿ ಫೈನಲ್ನಲ್ಲಿ 6 ಓವರ್ಗಳಲ್ಲಿ 16 ರನ್ ನೀಡಿ ಕೊಹ್ಲಿ,ಧವನ್ ಹಾಗೂ ರೋಹಿತ್ ವಿಕೆಟ್ ಪಡೆದು ಮಿಂಚಿದ್ದ ಅಮೀರ್ ಪಾಕ್ ಚಾಂಪಿಯನ್ ಆಗಲು ನೆರವಾಗಿದ್ದರು.
ಈಗಾಗಲೇ ವಿಶ್ವಕಪ್ ಗೆಲ್ಲುವ ತಂಡ ಎಂದು ಕರೆಸಿಕೊಳ್ಳುತ್ತಿರುವ ಇಂಗ್ಲೆಂಡ್ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧವೇ ರನ್ ಬಿಟ್ಟುಕೊಡದೆ ಪ್ರಮುಖರ ವಿಕೆಟ್ ಪಡೆಯಲು ಯಶಸ್ವಿಯಾಗಿರುವ ಅಮೀರ್ ಕುರಿತು, ಭಾರತೀಯ ಬ್ಯಾಟ್ಸ್ಮನ್ಗಳು ಆಲೋಚನೆ ಮಾಡುವಂತಾಗಿದೆ. ಈಗಾಗಲೇ ಧವನ್ ಇಲ್ಲದೇ ಕಣಕ್ಕಿಳಿಯುತ್ತಿರುವ ಭಾರತ ತಂಡ ಸ್ವಲ್ಪ ಯಾಮಾರಿದರೂ ಪಾಕಿಸ್ತಾನದ ವಿರುದ್ಧ ಮೊದಲ ಸೋಲು ಕಾಣಬೇಕಾಗಬಹುದು.