ಕರ್ನಾಟಕ

karnataka

ETV Bharat / briefs

ಸುಳ್ಳು ಹೇಳುವುದರಲ್ಲಿ ಮೋದಿಗೆ ಮೊದಲ ಬಹುಮಾನ: ಡಿಸಿಎಂ ಪರಮೇಶ್ವರ್ - ಲೋಕ ಸಭಾ

ಹನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಪರ ರೋಡ್ ಶೋ ನಡೆಸಿ ಅವರು ಮಾತನಾಡಿ, ಮmೋದಿಯವರು ಕುಮಾರಸ್ವಾಮಿ ಸರ್ಕಾರವನ್ನು 20 ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಇಲ್ಲದಿದ್ದರೇ ನಿಮಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

cnr

By

Published : Apr 14, 2019, 5:58 AM IST

ಚಾಮರಾಜನಗರ: ಸುಳ್ಳು ಹೇಳುವುದರಲ್ಲಿ ನರೇಂದ್ರ ಮೋದಿ ಅವರಿಗೆ ದೇಶದಲ್ಲೇ ಮೊದಲ ಬಹುಮಾನ ಕೊಡಬಹುದು ಎಂದು ಡಿಸಿಎಂ ಜಿ.ಪರಮೇಶ್ವರ ವ್ಯಂಗ್ಯವಾಡಿದ್ದಾರೆ.

ಹನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಪರ ರೋಡ್ ಶೋ ನಡೆಸಿ ಅವರು ಮಾತನಾಡಿ, ಕುಮಾರಸ್ವಾಮಿ ಸರ್ಕಾರವನ್ನು 20 ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಇಲ್ಲದಿದ್ದರೇ ನಿಮಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರ, ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡಿವೆ. 5 ವರ್ಷದಲ್ಲಿ ರೈತರಿಗೆ ಏನು ಮಾಡದ ನರೇಂದ್ರ ಮೋದಿ ಮನೆಗೆ ಹೋಗುವ ಸಮಯದಲ್ಲಿ ವರ್ಷಕ್ಕೆ 6 ಸಾವಿರ ಹಣ ನೀಡುತ್ತೇವೆ ಎಂದು ಬಂದಿದ್ದಾರೆ ಎಂದು ಹೇಳಿದರು.

ಡಿಸಿಎಂ ಪರಮೇಶ್ವರ್

ಇದೇ ವೇಳೆ, ಲೋಕಸಭಾ ಚುನಾವಣೆ ಮುಗಿದ ಬಳಿಕ ಸರ್ಕಾರ ಬೀಳುತ್ತದೆ ಎಂದು ಬಿಎಸ್ ವೈ ಹೇಳುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಸರ್ಕಾರ ಬೀಳಲ್ಲ,4 ವರ್ಷ ಸುಭದ್ರವಾಗಿ ನಮ್ಮ ಮೈತ್ರಿ ಸರ್ಕಾರ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

5 ಬಾರಿ ಸಂಸದರಾಗಿದ್ದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿಲ್ಲ. ಈ ವಯಸ್ಸಿನಲ್ಲೂ ಸ್ಪರ್ಧಿಸಿದ್ದು ಆರೋಗ್ಯವಾಗಿದ್ದಾರೆ ಎಂದುಕೊಂಡಿದ್ದೆ, ಅದರೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಿಶ್ರೀ ಅನಾರೋಗ್ಯ ಸಮಸ್ಯೆಯನ್ನು ಪ್ರಶ್ನಿಸಿ ಧ್ರುವನಾರಾಯಣಗೆ ಮತ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಆರ್.ಧ್ರುವನಾರಾಯಣ, ಶಾಸಕ ಆರ್.ನರೇಂದ್ರ ಇನ್ನಿತರರು ಇದ್ದರು‌.

ABOUT THE AUTHOR

...view details