ಲಖನೌ: ಸರ್ಕಾರಿ ಸಭೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಂಡಿದ್ದಾರೆ.
ಸರ್ಕಾರಿ ಸಭೆಗಳಲ್ಲಿ ಮೊಬೈಲ್ ಬ್ಯಾನ್...! ಕಟ್ಟುನಿಟ್ಟಾಗಿ ಪಾಲಿಸಿದ ಅಧಿಕಾರಿ ವರ್ಗ
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತಾಗಿ ಇಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಎಲ್ಲ ಅಧಿಕಾರಿಗಳು ಮೊಬೈಲ್ ಹೊರಗಿಟ್ಟು ಸಭೆಗೆ ಹಾಜರಾಗಿದ್ದಾರೆ.
ಮೊಬೈಲ್
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತಾಗಿ ಇಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಎಲ್ಲ ಅಧಿಕಾರಿಗಳು ಮೊಬೈಲ್ಗಳನ್ನ ಹೊರಗಿಟ್ಟು ಸಭೆಗೆ ಹಾಜರಾಗಿದ್ದರು
ಸುಮಾರು ಐವತ್ತಕ್ಕೂ ಅಧಿಕ ಮೊಬೈಲ್ಗಳನ್ನು ಸಭೆಗೆ ಮುನ್ನ ಎಲ್ಲರೂ ನಿರ್ದೇಶಿತ ಸ್ಥಳದಲ್ಲಿಟ್ಟಿದ್ದು, ಆಯಾ ಮೊಬೈಲ್ಗಳ ಮೇಲೆ ಅವರುಗಳ ಹೆಸರಿನ ಸ್ಟಿಕರ್ ಅಂಟಿಸಲಾಗಿತ್ತು.