ಮುಂಬೈ: ಕ್ರಿಕೆಟ್ ಜಗತ್ತಿನಲ್ಲೇ ಶ್ರೀಮಂತ ಲೀಗ್ ಆಗಿರುವ ಐಪಿಎಲ್ನ ಪ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಪಟ್ಟಿಯಲ್ಲಿ ಏಷ್ಯಾದಲ್ಲಿ ಮೊದಲ ಹಾಗೂ ಪ್ರಪಂಚದಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಇನ್ಸ್ಟಾಗ್ರಾಮ್ ವೀಕ್ಷಣೆಯಲ್ಲಿ ಮುಂಬೈಗೆ 5 ನೇ ಸ್ಥಾನ:
ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿರುವ ಅತಿ ಹೆಚ್ಚು ವೀಕ್ಷಣೆಯಾಗಿರುವ ಕ್ರೀಡಾ ತಂಡಗಳ ಇನ್ಸ್ಟಾಗ್ರಾಮ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಪೇಜ್ನ ಪೋಸ್ಟ್ಗಳನ್ನು 34.5 ಮಿಲಿಯನ್ಸ್ ಜನರು ವೀಕ್ಷಣೆ ಮಾಡಿದ್ದಾರೆ. ಸಿಎಸ್ಕೆ ತಂಡದ ಪೋಸ್ಟ್ಗಳು ಸಹಾ ಇಷ್ಠೇ ಪ್ರಮಾಣದ ವೀಕ್ಷಣೆ ಪಡೆದಿವೆಯಾದರೂ ಯೂಟ್ಯೂಬ್ನಲ್ಲಿ ಸಿಎಸ್ಕೆಗಿಂತ ಮುಂಬೈ ಇಂಡಿಯನ್ಸ್ ತಂಡದ ವಿಡಿಯೋಗಳನ್ನು ಹೆಚ್ಚಿನ ಜನರು ವೀಕ್ಷಿಸಿರುವುದರಿಂದ ಮುಂಬೈ ಇಂಡಿಯನ್ಸ್ ಶ್ರೇಯಾಂಕದಲ್ಲಿ ಸಿಎಸ್ಕೆಯನ್ನು ಹಿಂದಿಕ್ಕಿದೆ.
ಇನ್ಸ್ಟಾಗ್ರಾಮ್ನ ಹೆಚ್ಚು ವೀಕ್ಷಣೆ ಪಡೆದಿರುವ ಕ್ರೀಡಾ ತಂಡದಲ್ಲಿ ಮೊದಲ 3 ಮೂರು ಸ್ಥಾನದಲ್ಲಿ ಫುಟ್ಬಾಲ್ ಕ್ಲಬ್ಗಳಾದ ಬಾರ್ಸಿಲೋನಾ(108 ಮಿಲಿಯನ್ಸ್ ವೀಕ್ಷಣೆ ) 2ನೇ ಸ್ಥಾನದಲ್ಲಿ ಲೈವರ್ಪೂಲ್ (93.3 ಮಿಲಿಯನ್) 3 ನೇ ಸ್ಥಾನದಲ್ಲಿ ಜುವೆಂಟಸ್(65.6 ಮಿಲಿಯನ್) ಇವೆ. ಮುಂಬೈ ಇಂಡಿಯನ್ಸ್ 5 ನೇ ಸ್ಥಾನದಲ್ಲಿದೆ.