ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದೇ 28 ರಂದು ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ ಟಿ-20 ಪಂದ್ಯ ನಡೆಯಲಿದ್ದು ಈ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಹಳಷ್ಟು ಮಂದಿ ಬರುವ ಸಾಧ್ಯತೆ ಇರುವುದರಿಂದ ಸ್ಟೇಡಿಯಂ ಸುತ್ತ-ಮುತ್ತ ವಾಹನ ಸವಾರರಿಗೆ ವಾಹನ ನಿಲುಗಡೆಯನ್ನುನಿಷೇಧ ಮಾಡಿ ಪರ್ಯಾಯ ವ್ಯವಸ್ಥೆಯನ್ನ ಒದಗಿಸಲಾಗಿದೆ. ಇದನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಗರ ಟ್ರಾಫಿಕ್ ಪೋಲಿಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.
ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ ಟಿ-20... ಎಲ್ಲೆಲ್ಲಿ ವಾಹನ ನಿಲುಗಡೆಗೆ ಅವಕಾಶ? - stadium
ಚಿನ್ನಸ್ವಾಮಿಯಲ್ಲಿ ಮಾರ್ಚ್ 28 ರಂದು ನಡೆಯುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ನಡುವಿನ ಪಂದ್ಯಕ್ಕೆ ಆಗಮಿಸುವ ಅಭಿಮಾನಿಗಳು ಸ್ವಂತ ವಾಹನಗಳಿಗಿಂದ ಮೆಟ್ರೋವನ್ನು ಉಪಯೋಗಿಸುವ ಮೂಲಕ ನಗರದಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವಂತೆ ಟ್ರಾಫಿಕ್ ಆಯುಕ್ತರು ಮನವಿ ಮಾಡಿದ್ದಾರೆ.
ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ 11-30ರವರೆಗೆ ನಿಷೇಧ:
ಕ್ವೀನ್ಸ್ ರಸ್ತೆಯಲ್ಲಿ ಬಾಳೆಕುಂದ್ರಿ ವೃತ್ತದಿಂದ ಕ್ವಿನ್ಸ್ ರಸ್ತೆಯ ಎರಡುಕಡೆ, ಎಂಜಿ ರಸ್ತೆಯಲ್ಲಿ ಅನಿಲ್ ಕುಂಬೈ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಲಿಂಕ್ ರಸ್ತೆಯ ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ,ರಾಜಭವನ ರಸ್ತೆ ಟಿ ಚೌಡಯ್ಯ ರಸ್ತೆ ಮತ್ತು ರೆಸ್ ಕೋರ್ಸ್ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡು ಕಡೆ , ಕಬ್ಬನ್ ರಸ್ತೆಯ ಸಿಟಿ ಓ ವೃತ್ತದಿಂದ ಡಿಕೆನ್ಸನ್ ರಸ್ತೆ, ಸೆಂಟ್ ಮಾರ್ಕ್ಸ್ರಸ್ತೆಯ ಕ್ಯಾಶ್ ಫಾರ್ಮಸಿ ಜಂಕ್ಸನ್ ನಿಂದ ಅನಿಲ್‌ಕುಂಬೈ ವೃತ್ತ, ಮ್ಯೂಸಿಯಂ ರಸ್ತೆಯಿಂದ ಎಂಜಿ ರಸ್ತೆ ಸೇಂಟ್ ಮಾರ್ಕ್ಸ್ ರಸ್ತೆವರೆಗೆ, ಕಸ್ತೂರ ಬಾ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಹಾಗೂ ಮಲ್ಯ ಆಸ್ಪತ್ರೆ ಸಿದ್ದಲಿಂಗಯ್ಯ ವೃತ್ತದಿಂದ ಆರ್ ಆರ್ ಎಂ ಆರ್ ವೃತ್ತದವರೆಗೆ, ಕಬ್ಬನ್ ಪಾರ್ಕ್ ಓಳಭಾಗದ ಕಿಂಗ್ ರಸ್ತೆ , ಪ್ರಸ್ ಕ್ಲಬ್ ಮುಂಭಾಗ, ಭಾಲಭವನ ಮುಂಭಾಗ,ಪೌಂಟೇನ್ ರಸ್ತೆ ವಾಹನ ಪಾರ್ಕಿಂಗ್, ಲ್ಯಾ ವೆಲ್ಲಿ ರಸ್ತೆಯ ಕ್ವೀನ್ಸ್ ವೃತ್ತದೊಂದ ವಿಠಲ್ ಮಲ್ಯ ರಸ್ತೆಯಿಂದ ಜಂಕ್ಷನ್ ವರೆಗೆ, ವಿಠಲ್ ಮಲ್ಯ ರಸ್ತೆ ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ಮಾರ್ಕ್ಸ್ ರಸ್ತೆಯ ಬಿಷಪ್ ಕಾಟನ್ ಬಾಲಕೀಯರ ಶಾಲೆಯವರೆಗೆ ವಾಹನ ಸಂಪೂರ್ಣ ನಿಷೇಧ ಮಾಡಲಾಗಿದೆ
ಎಲ್ಲಿ ವಾಹನ ನಿಲುಗಡೆ ಮಾಡಲು ವ್ಯವಸ್ಥೆ..
ಪಂದ್ಯ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರ ವಾಹನಗಳನ್ನ ಸೆಂಟ್ ಜೊಸೆಫ್ ಇಂಡಿಯನದ ಹೈಸ್ಕೂಲ್ ಮೈದಾನ ಮತ್ತು ಯುಬಿಸಿಟಿಯ ನಿಲುಗಡೆ ಸ್ಥಳ, ಶಿವಾಜಿನಗರದ ಬಸ್ ನಿಲ್ದಾಣದ 1ನೇ ಮಹಡಿಯ ವಾಹನ ನಿಲುಗಡೆ, ಕೆ.ಎಸ್. ಸಿ.ಎ. ಸದಸ್ಯರ ವಾಹನಗಳನ್ನ ಬೌರಿಂಗ್ ಇನ್ಸ್ಟಿಟ್ಯೂಟ್ ಮತ್ತ ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನ, ಚಿನ್ನಸ್ವಾಮಿ ಕ್ರೀಂಡಾಗಣ ಸುತ್ತ ಮುತ್ತಾ ವಾಹನಗಳ ನಿಲುಗಡೆಗೆ ವ್ಯವಸ್ಥೆ, ಹಾಗೂ ಎಂಜಿ ರಸ್ತೆ ಯಲ್ಲಿರುವ ಪ್ರೀಪೇಯ್ಸಡ್ಆಟೋ ನಿಲ್ದಾಣ ಬಳಸುವಂತೆ ಮನವಿ ಮಾಡಲಾಗಿದೆ.