ವಿಜಯಪುರ:ದೇಹ ಹಾಗೂ ಮನಸ್ಸಿನ ಶುದ್ಧಿಯ ಜೊತೆಗೆ ಸತ್ಯ, ನಿಷ್ಠೆಯಿಂದ ಕಾಯಕದಲ್ಲಿ ತೊಡಗಲು ರಂಜಾನ್ ಹಬ್ಬ ಪ್ರೇರಣೆ ನೀಡುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ದೇಹ, ಮನಸ್ಸು ಶುದ್ಧಿಗೆ ರಂಜಾನ್ ಪ್ರೇರಣೆ: ಎಂ.ಬಿ.ಪಾಟೀಲ್
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ರಂಜಾನ್ ಹಬ್ಬ ಪ್ರಯುಕ್ತ ಸೋಮವಾರ ಸಂಜೆ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಪಾಲ್ಗೊಂಡು ಮುಸ್ಲಿಂ ಸಮುದಾಯಕ್ಕೆ ಶುಭಾಶಯ ಕೋರಿದರು.
ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದ ಎಂ.ಬಿ.ಪಾಟೀಲ್.
ಸೋಮವಾರ ಸಂಜೆ ರಂಜಾನ್ ಪ್ರಯುಕ್ತ ತಿಕೋಟಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಸಚಿವರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ಈ ಹಬ್ಬ ಆಹಾರ ಮತ್ತು ನೀರಿನ ಮಹತ್ವವನ್ನು ತಿಳಿಸುತ್ತದೆ. ಅಲ್ಲದೆ, ಉಪವಾಸ ಕೈಗೊಳ್ಳುವ ಮೂಲಕ ದೇಹ ಶುದ್ಧಿಗೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಖ್ಯಾತ ಪ್ರವಚನಕಾರ ಇಳಕಲ್‍ನ ಲಾಲ್ ಹುಸೇನ್ ಕಂದಗಲ್, ಮುಖಂಡರಾದ ಎಸ್.ಎಂ.ಪಾಟೀಲ್ ಗಣಿಯಾರ, ಗೈಬಿಲಾಲ್ ಮುಜಾವರ, ಹಾಜಿಲಾಲ್ ಕೊಟ್ಟಲಗಿ, ಅಲ್ತಾಫ್ ಬಾಗವಾನ, ಪೀರ್ ಪಾಟೀಲ್, ಚಾಂದಸಾಬ್ ಸೇರಿದಂತೆ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸಿದರು.