ಕರ್ನಾಟಕ

karnataka

ETV Bharat / briefs

ಈ ಯೋಧ​ನ ಸ್ಟೈಲೇ ಬೇರೆ... ಲವರ್​​ ಜೊತೆನೇ ಹೆಂಡ್ತಿಯನ್ನು ಮರುಮದುವೆಯಾದ ಭೂಪ!

ಕೆಲವರಿಗೆ ಒಂದೇ ಮದುವೆ ಮಾಡಿಕೊಂಡು ಸಂಸಾರ ನಿಭಾಯಿಸೋದ್ರಲ್ಲಿ ಹರಸಾಹಸ ಪಡ್ತಾರೆ. ಆದ್ರೆ ಇಲ್ಲೋರ್ವ ಯೋಧ ತನ್ನ ಗರ್ಲ್​ಫ್ರೆಂಡ್​ ಜೊತೆ ಹೆಂಡ್ತಿಯನ್ನೇ ಮರುಮದುವೆ ಆಗಿರುವ ವಿಚಿತ್ರ ಘಟನೆ ಛತ್ತೀಸ್​ಗಢ್​ದಲ್ಲಿ ನಡೆದಿದೆ.

ಯೋಧ​ನ ಸ್ಟೈಲೇ ಬೇರೆ

By

Published : May 21, 2019, 6:47 PM IST

ಜಶ್ಪುರ್​: ಯೋಧನೋರ್ವ ತನ್ನ ಲವರ್​ ಜೊತೆ ಜೊತೆನೇ ಹೆಂಡ್ತಿಯನ್ನೂ ಮರು ಮದುವೆಯಾಗಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅಷ್ಟೇ ಏಕೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈಗ ಈ ಸುದ್ದಿ ಛತ್ತೀಸ್​ಗಢ್​​ದ ಜಶ್ಪುರ್​ ಜಿಲ್ಲೆಯಲ್ಲಿ ಸಂಚಲನವನ್ನುಂಟು ಮಾಡಿದೆ.

ಜಶ್ಪುರ್​ ನಿವಾಸಿ ಸಿಆರ್​ಪಿಎಫ್​ ಯೋಧ ಅನಿಲ್​ ಪೈಕ್ರಾ ವಾರಣಾಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಳಿಕ ಅಂಗನವಾಡಿ ಸಿಬ್ಬಂದಿವೋರ್ವಳ ಜೊತೆ ಲವ್​ನಲ್ಲಿ ಬಿದ್ದಿದ್ದಾನೆ. ರಜೆ ಮೇಲೆ ಮನೆಗೆ ಬಂದ ಯೋಧ ಹೆಂಡ್ತಿಯ ಜೊತೆಗಿಂತ ಬಾಘ್ದೋಲ್​ದಲ್ಲಿರುವ ಗರ್ಲ್​ಫ್ರೆಂಡ್​ ಬಳಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಈ ಸುದ್ದಿ ಯೋಧನ ಪತ್ನಿಗೂ ತಿಳಿದಿತ್ತು. ಈ ಸುದ್ದಿ ಮತ್ತಷ್ಟು ಬೆಳೆಯುವ ಮುನ್ನವೇ ಬಾಘ್ದೋಲ್​ ಗ್ರಾಮಸ್ಥರು ಯೋಧ ಅನಿಲ್​ ಪೈಕ್ರಾ ಜೊತೆ ಲವರ್​ ಮತ್ತು ಆತನ ಹೆಂಡ್ತಿಗೆ ಮರು ಮದುವೆ ಮಾಡಿಸಿದರು.

ನನ್ನ ಜೀವನದಲ್ಲಿ ಇಂತಹ ಮದುವೆನೇ ನೋಡಿಲ್ಲ. ಇಬ್ಬರೊಂದಿಗೆ ಯೋಧನೋರ್ವ ಒಂದೇ ಬಾರಿ ಸಪ್ತಪದಿ ತುಳಿದಿದ್ದಾನೆ. ಯೋಧ ಅನಿಲ್​ ಪೈಕ್ರಾಗೆ ನಾಲ್ಕು ವರ್ಷದ ಹಿಂದೆ ಮದುವೆಯಾದ್ರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆತ ಇನ್ನೊಂದು ಮದುವೆಯಾಗಲು ಯೋಚಿಸಿದ್ದ. ಹಾಗಾಗಿ ಇದೊಂದು ಪಕ್ಕಾ ಯೋಜಿತ ಮದುವೆ ಎಂದು ಗ್ರಾಮದ ಸರ್​ಪಂಚ್​ ಹೇಳಿದ್ದಾರೆ.

ಸರ್ಕಾರಿ ಸಿಬ್ಬಂದಿ ಕಾನೂನು ಬಾಹಿರವಾಗಿ ಎರಡು ಮದುವೆ ಆಗಬಾರದು. ಒಂದು ವೇಳೆ ಆದಲ್ಲಿ ಅವರ ಕೆಲಸಕ್ಕೆ ಕುತ್ತು ಬರುತ್ತೆ. ಈ ಪರಿಸ್ಥಿತಿಯನ್ನು ಯೋಧ ಅನಿಲ್​ ಪೈಕ್ರಾ ಸಹ ಎದುರಿಸಬೇಕೆಂದು ಸಿಆರ್​ಪಿಎಫ್​ ಅಧಿಕಾರಿ ಬಿಸಿ ಪತ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಯೋಧ ಅನಿಲ್​ ಪೈಕ್ರಾ ಲವರ್​ ಜೊತೆನೇ ಹೆಂಡ್ತಿಯನ್ನು ಮರುಮದುವೆಯಾಗಿ ಎಲ್ಲರನ್ನು ಬೆರಗುಗೊಳಿಸಿದ್ದು ಒಂದು ಕಡೆಯಾದ್ರೆ, ಎರಡು ಮದುವೆ ಮಾಡಿಕೊಂಡು ತನ್ನ ಕೆಲಸಕ್ಕೆ ಕುತ್ತು ತಂದುಕೊಂಡಿದ್ದು ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ABOUT THE AUTHOR

...view details