ನವದೆಹಲಿ/ಮಾಲೆ:ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಮುನ್ನಡೆ ದೊರೆತಿದೆ.
ಮಾಲ್ಡೀವ್ಸ್ ದೇಶ ಬುಧವಾರದಂದು ಮೋದಿಯನ್ನು ಆಹ್ವಾನಿಸಿದ್ದು, ಸಂಸತ್ ಉದ್ದೇಶಿಸಿ ಮಾತನಾಡುವಂತೆ ಮನವಿ ಮಾಡಿದೆ.

ಮೋದಿ ನಮ್ಮ ಸಂಸತ್ ಉದ್ದೇಶಿಸಿ ಮಾತನಾಡುವಂತೆ ಎಲ್ಲರೂ ಒಮ್ಮತ ಸೂಚಿಸಿದ್ದು, ಮುಂಬರುವ ಭೇಟಿಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಮಾಲ್ಡೀವ್ಸ್ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿದ ಬಳಿಕ ಮೊದಲ ವಿದೇಶ ಪ್ರವಾಸಕ್ಕಾಗಿ ಮಾಲ್ಡೀವ್ಸ್ ದೇಶ ಆರಿಸಿಕೊಂಡಿದ್ದು, ಜೂನ್ ಏಳು ಹಾಗೂ ಎಂಟರಂದು ಭೇಟಿ ನೀಡಲಿದ್ದಾರೆ.
2018ರ ನವೆಂಬರ್ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಇಬ್ರಾಹಿಂ ಮೊಹಮ್ಮದ್ ಸೋಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.