ಕರ್ನಾಟಕ

karnataka

ETV Bharat / briefs

ಮಲೇಷ್ಯಾದಲ್ಲಿ ಕೊರೊನಾ ವೈರಸ್‌ನ ಹೊಸ ತಳಿ ಪತ್ತೆ, ಕೋವಿಡ್​ ಗಿಂತ 10 ಪಟ್ಟು ಡೇಂಜರ್​!

ಮಲೇಷ್ಯಾದಲ್ಲಿ ಕೊರೊನಾ ವೈರಸ್‌ನ ಹೊಸ ತಳಿ ಕಂಡುಬಂದಿದ್ದು, ಈಗಿನದ್ದಕ್ಕಿಂತ ಹೆಚ್ಚಿನ ಅಪಾಯಕಾರಿ ಎನ್ನಲಾಗಿದೆ.

new COVID-19 strain
new COVID-19 strain

By

Published : Aug 17, 2020, 6:21 PM IST

ಕೌಲಾಲಂಪುರ:ಕೊರೊನಾದಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ಇದರ ನಡುವೆ ಮಲೇಷ್ಯಾದಲ್ಲಿ ಕೊರೊನಾ ವೈರಸ್‌ನ ಹೊಸ ತಳಿ ಕಂಡುಬಂದಿದ್ದು, ಈಗಿನದ್ದಕ್ಕಿಂತ ಹತ್ತುಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿದೆ ಎನ್ನಲಾಗಿದೆ.

ಈ ಮೊದಲು ವಿಶ್ವದ ಇತರ ಭಾಗಗಳಲ್ಲಿ ಈ ವೈರಸ್‌ ಕಂಡುಬಂದಿದ್ದು, ಡಿ614ಜಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಹೊಸ ವೈರಸ್‌ ಮಲೇಷ್ಯಾದ ಏರಿಯಾ‌ ಒಂದರಲ್ಲಿ ಕಾಣಿಸಿಕೊಂಡಿದ್ದು, 45 ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಹೊಸ ಸೋಂಕಿಗೆ ಸಂಬಂಧಪಟ್ಟದ್ದಾಗಿದೆ. ಈ ಕ್ಲಸ್ಟರ್‌ನಲ್ಲಿ ಭಾರತೀಯ ಮೂಲದ ರೆಸ್ಟೋರೆಂಟ್‌ ಮಾಲೀಕ 14 ದಿನಗಳ ಕ್ವಾರಂಟೈನ್‌ ಉಲ್ಲಂಘಿಸಿ 15ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಲು ಕಾರಣವಾಗಿದ್ದ. ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಆತನಿಂದಲೇ ಅಲ್ಲಿ 45 ಜನಕ್ಕೆ ಸೋಂಕು ತಗುಲಿತ್ತು. ಈಗ ಅದರಲ್ಲಿ ಮೂವರಿಗೆ ಹೊಸ ಸೋಂಕು ಇರುವುದು ಪತ್ತೆಯಾಗಿದೆ.

ಫಿಲಿಪ್ಪೀನ್ಸ್​​ನಿಂದ ಮಲೇಷಿಯಾಕ್ಕೆ ವಾಪಸಾದ ಜನರಿರುವ ಕ್ಲಸ್ಟರ್‌ನಲ್ಲಿಯೂ ಕೂಡ ವೈರಸ್‌ನ ಹೊಸ ತಳಿ ಪತ್ತೆಯಾಗಿದೆ. ಕೊರೊನಾದ ಹೊಸ ರೂಪಾಂತರವು ಸೋಂಕಿನ ಹರಡುವಿಕೆಯನ್ನು ವೇಗಗೊಳಿಸುತ್ತದೆ ಎನ್ನಲಾಗುತ್ತಿದೆ.

ವೈರಸ್‌ ಹೊಸ ರೂಪಾಂತರದ ವಿರುದ್ಧ ಸದ್ಯ ಸಂಶೋಧಿಸಲ್ಪಡುತ್ತಿರುವ ಲಸಿಕೆಗಳು ನಿಷ್ಪರಿಣಾಮ ಬೀರಬಹುದು ಅಥವಾ ಅಪೂರ್ಣ ಆಗಬಹುದು ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕ ನೂರ್ ಹಿಶಮ್ ಅಬ್ದುಲ್ಲಾ ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details