ಕರ್ನಾಟಕ

karnataka

ETV Bharat / briefs

ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮೋದಿ ಬಯೋಪಿಕ್ ಟೀಮ್ - ಸುಪ್ರೀಂ ಕೋರ್ಟ್

ಈ ಮೊದಲು ತಡೆಯಾಜ್ಞೆ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ರಿಲೀಸ್​ ವಿಚಾರವನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ವಿವಾದವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು.

ಮೋದಿ ಬಯೋಪಿಕ್

By

Published : Apr 12, 2019, 1:35 PM IST

ನವದೆಹಲಿ: ಮೋದಿ ಬಯೋಪಿಕ್​ ಬಿಡುಗಡೆಗೆ ಚುನಾವಣೆ ಆಯೋಗ ನೀಡಿರುವ ತಡೆಯನ್ನು ಪ್ರಶ್ನಿಸಿ ಸಿನಿಮಾ ತಂಡ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

ಈ ಮೊದಲು ತಡೆಯಾಜ್ಞೆ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ರಿಲೀಸ್​ ವಿಚಾರವನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ವಿವಾದವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗ, ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಯಾವುದೇ ಬಯೋಪಿಕ್ ರಿಲೀಸ್ ಮಾಡುವಂತಿಲ್ಲ ಎಂದಿತ್ತು.

ಸದ್ಯ ಆಯೋಗದ ಈ ನಿರ್ಧಾರವನ್ನು ಮೋದಿ ಬಯೋಪಿಕ್ ತಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದೆ. ಚಿತ್ರತಂಡ ಅರ್ಜಿಯನ್ನು ಪರಿಗಣಿಸಿರು ಕೋರ್ಟ್​ ಏಪ್ರಿಲ್ 15ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ವಿವೇಕ್ ಒಬೇರಾಯ್​ ನಟಿಸಿರುವ ಮೋದಿ ಬಯೋಪಿಕ್ ಸಿನಿಮಾವನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಏಪ್ರಿಲ್ 11ರಂದು ಬಿಡುಗಡೆಯಾಗಬೇಕಿತ್ತು.

ABOUT THE AUTHOR

...view details