ದಿನೇ ದಿನೇ ಹೊಸ ಕಥೆಗಳನ್ನ ಇಟ್ಟುಕೊಂಡು ಗಾಂಧಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 'ಮಹಿಷಾಸುರ' ಎನ್ನುವ ಟ್ರೆಂಡಿ ಟೈಟಲ್ನೊಂದಿಗೆ ಹೊಸಬರ ಚಿತ್ರತಂಡವೊಂದು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿನ್ನೆ ಸಿನಿಮಾದ ಟೈಟಲ್ ಅನ್ನು ಚಿತ್ರತಂಡ ಲಾಂಚ್ ಮಾಡಿದೆ.
ನೈಜ ಘಟನೆ ಆಧರಿಸಿರೋ 'ಮಹಿಷಾಸುರ'ನ ಕಥೆ ಏನು ಗೊತ್ತಾ? - ನಿರ್ದೇಶಕ ಉದಯ್ ಪ್ರಸನ್ನ
ಮೇಲುಕೋಟೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನ ಆಧರಿಸಿದ ಹಾಗೂ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದ 'ಮಹಿಷಾಸುರ' ಚಿತ್ರದ ಟೈಟಲ್ ಅನ್ನು ಚಿತ್ರತಂಡ ಲಾಂಚ್ ಮಾಡಿದೆ.
ಐವರು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಉದಯ್ ಪ್ರಸನ್ನ, ಮೇಲುಕೋಟೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನ ಆಧರಿಸಿ ಸಿನಿಮಾ ಮಾಡಿದ್ದಾರೆ. ಇದೊಂದು ಟ್ರಯಾಂಗಲ್ ಲವ್ ಸ್ಟೋರಿ ಆಗಿದ್ದು, ಚಿತ್ರದಲ್ಲಿ ಮಂಜು ಹಾಗೂ ಸುದರ್ಶನ್ ಇಬ್ಬರು ನವ ನಟರು ಅಭಿನಯಿಸಿದ್ದಾರೆ. ಇವರಿಬ್ಬರಿಗೆ ನಟಿ ಬಿಂದುಶ್ರೀ ಜೋಡಿಯಾಗಿದ್ದಾರೆ. ದೊಡ್ಡ ಬಳ್ಳಾಪುರ ಹಾಗು ಮೇಲುಕೋಟೆಯಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
ನಿರ್ದೇಶಕರು ಹೇಳುವ ಪ್ರಕಾರ, ಇಬ್ಬರು ನಟರು ಚಿಕ್ಕನಿಂದಲೂ ಸ್ನೇಹಿತರು. ಅವರು ದೊಡ್ಡವರಾದ ಮೇಲೆ ಪ್ರೀತಿ ಸಿಗದಿದ್ದಾಗ ಇಬ್ಬರಲ್ಲಿ ಯಾರು ಮಹಿಷಾಸುರನ ಅವತಾರ ತಾಳುತ್ತಾರೆ ಅನ್ನೋದು ಚಿತ್ರದ ತಿರಳು. ಹಳ್ಳಿ ಬ್ಯಾಕ್ ಟ್ರಾಪ್ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕೃಷ್ಣ ಎಂಬುವರು ಕ್ಯಾಮರಾ ವರ್ಕ್ ಮಾಡಿದ್ದಾರೆ. ನಿರ್ದೇಶಕ ಉದಯ್ ಪ್ರಸನ್ನ ಸಂಬಂಧಿಯಾಗಿರೋ ನಿರ್ಮಾಪಕಿ ಲೀಲಾವತಿ 80 ಲಕ್ಷ ರೂ. ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.