ಚಾಮರಾಜನಗರ: ಇದೇ ಮೊದಲ ಬಾರಿಗೆ ಎಂಬಂತೆ ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆಯಲ್ಲಿ ಬರೋಬ್ಬರಿ 2 ಕೋಟಿ 13 ಲಕ್ಷ ರೂ. ಸಂಗ್ರಹವಾಗಿದೆ.
ಈ ಬಾರಿಯೂ 'ಕೋಟಿ' ದಾಟಿದ ಮಾದಪ್ಪ... ಹಣ ಸಂಗ್ರಹದಲ್ಲಿ ದಾಖಲೆ!
ಕಳೆದ ಬಾರಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಯದ ಹುಂಡಿ ಎಣಿಕೆಯಲ್ಲಿ 1.46 ಕೋಟಿ ರೂ. ಸಂಗ್ರಹವಾಗಿತ್ತು.ಈ ಬಾರಿ 2.13 ಕೋಟಿ ರೂ.ಸಂಗ್ರಹವಾಗಿರುವುದು ಒಂದು ರೀತಿಯ ದಾಖಲೆಯಾಗಿದೆ.
ಮಲೆಮಹದೇಶ್ವರ ಬೆಟ್ಟ
ಕಳೆದ ಬಾರಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಯದ ಹುಂಡಿ ಎಣಿಕೆಯಲ್ಲಿ 1.46 ಕೋಟಿ ರೂ. ಸಂಗ್ರಹವಾಗಿತ್ತು.ಈ ಬಾರಿ 2.13 ಕೋಟಿ ರೂ.ಸಂಗ್ರಹವಾಗಿರುವುದು ಒಂದು ರೀತಿಯ ದಾಖಲೆಯಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ ಈಟಿವಿ ಭಾರತ್ಕ್ಕೆ ಮಾಹಿತಿ ನೀಡಿದ್ದಾರೆ.
2ಕೋಟಿ 13 ಲಕ್ಷದ 93ಸಾವಿರದ ಮುನ್ನೂರ ಮೂವತ್ತನಾಲ್ಕು ರೂ. ಹಣ, 55ಗ್ರಾಂ ಚಿನ್ನ, 1ಕೆಜಿ ಎಂಟುನೂರು 15ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.