ಕರ್ನಾಟಕ

karnataka

ETV Bharat / briefs

ಚುನಾವಣೆಯಲ್ಲಿ ಬಳಕೆಯಾಯ್ತಾ ಕಳಪೆ ಶಾಯಿ...? ಮೈಸೂರು ಪೇಂಟ್ಸ್​ ಬಗ್ಗೆ ಟ್ವಿಟ್ಟಿಗರ ಸಂಶಯ - ಹೈದರಾಬಾದ್

ಟ್ವಿಟರ್​​ನಲ್ಲಿ ಹಲವು ಮಂದಿ ಕೈಬೆರಳಿಗೆ ಹಾಕಿದ್ದ ಶಾಯಿಯನ್ನು ಸುಲಭವಾಗಿ ಅಳಿಸಬಹುದು ಎಂದು ಪೋಟೋ ಹಾಗೂ ವಿಡಿಯೋ ಮೂಲಕ ಸಾಕ್ಷಿ ಸಮೇತ ಮುಂದಿಟ್ಟಿದ್ದಾರೆ.

ಶಾಯಿ

By

Published : Apr 12, 2019, 3:27 PM IST

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಮತದಾತನ ವೇಳೆ ಹಾಕಲಾದ ಶಾಯಿಯ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ.

ಸಂಜೆ ವೇಳೆ ಮತದಾರರ ಕೈಬೆರಳಿಗೆ ಹಾಕಲಾಗಿದ್ದ ಶಾಯಿಯನ್ನು ಸುಲಭವಾಗಿ ಅಳಿಸಲಾಗುತ್ತಿತ್ತು ಎನ್ನುವ ವಿಚಾರ ಬಯಲಾಗಿದೆ.

ಟ್ವಿಟರ್​​ನಲ್ಲಿ ಹಲವು ಮಂದಿ ಕೈಬೆರಳಿಗೆ ಹಾಕಿದ್ದ ಶಾಯಿಯನ್ನು ಸುಲಭವಾಗಿ ಅಳಿಸಬಹುದು ಎಂದು ಪೋಟೋ ಹಾಗೂ ವಿಡಿಯೋ ಮೂಲಕ ಸಾಕ್ಷಿ ಸಮೇತ ಮುಂದಿಟ್ಟಿದ್ದಾರೆ.

ಹೈದರಾಬಾದ್ ಮೂಲದ ಪತ್ರಕರ್ತೆಯೋರ್ವರು ನೈಲ್​ ಪಾಲಿಶ್​ ರಿಮೂವರ್​ ಮೂಲಕ ಶಾಯಿಯನ್ನು ಅಳಿಸಬಹುದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಈ ವಿಚಾರ ಚುನಾವಣೆಯ ವೇಳೆ ಬಳಕೆಯಾಗುವ ಶಾಯಿ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಇದು ರಾಜಕೀಯ ಮೇಲಾಟಗಳಿಗೆ ಇದು ಕಾರಣವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಮೈಸೂರು ಪೇಂಟ್ಸ್​ ಹಾಗೂ ವಾರ್ನಿಷ್ ಸಂಸ್ಥೆ ತಯಾರಿಸುವ ಈ ಇಂಕ್​ ದೇಶಾದ್ಯಂತ ಚುನಾವಣೆ ವೇಳೆ ಬಳಕೆಯಾಗುತ್ತಿದೆ.

ABOUT THE AUTHOR

...view details