ಕರ್ನಾಟಕ

karnataka

ETV Bharat / briefs

ಪ್ರೀತ್ಸೆ.. ಪ್ರೀತ್ಸೆ.. ಅಂತ ಪೀಡಿಸಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿನಿ!​​​​​​​ - ಕಿರುಕುಳ

ಕಳೆದೊಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ ಮಂಜುನಾಥ್​ನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಸಾವಿನ ಕದ ತಟ್ಟಿದ್ದಾಳೆ.

ನೇಣಿಗೆ ಶರಣಾದ ವಿದ್ಯಾರ್ಥಿನಿ

By

Published : May 8, 2019, 2:12 AM IST

Updated : May 8, 2019, 8:54 AM IST

ಬೆಂಗಳೂರು:ಸಹಪಾಠಿಯಿಂದ ಕಿರುಕುಳ ಅನುಭವಿಸುತ್ತಿದ್ದ ವಿದ್ಯಾರ್ಥಿನಿವೋರ್ವಳು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ನಡೆದಿದೆ‌

ನೇಣಿಗೆ ಶರಣಾಗಿರುವ ವಿದ್ಯಾರ್ಥಿನಿ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. 10ನೇ ತರಗತಿಯಲ್ಲಿ ಮೃತ ವಿದ್ಯಾರ್ಥಿನಿಯ ಜೊತೆ ಓದಿದ್ದ ಸಹಪಾಠಿ ಮಂಜುನಾಥ್​ ಕಳೆದ ಒಂದು ವರ್ಷದಿಂದ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಎನ್ನಲಾಗಿದೆ.. ಆತನ ಕಿರುಕುಳಕ್ಕೆ ಬೆಸತ್ತು ಕೆಆರ್ ಪುರಂನ ಅಕ್ಷಯನಗರದಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಕಸ್ತೂರಿನಗರದ ರೆಸಿಡೆನ್ಸಿ ಕಾಲೇಜ್​ನಲ್ಲಿ ಆರೋಪಿ ಮಂಜುನಾಥ್ ವ್ಯಾಸಂಗ ಮಾಡುತ್ತಿದ್ದಾನೆ.

ತಮ್ಮ ಮಗಳ ಹಿಂದೆ ಮಂಜುನಾಥ್​ ಬಿದ್ದಿರುವ ಮಾಹಿತಿ ತಿಳಿದಿದ್ದ ವಿದ್ಯಾರ್ಥಿನಿ ತಂದೆ ಶ್ರೀನಿವಾಸ ಮೂರ್ತಿ, ಆತನಿಗೆ ವಾರ್ನಿಂಗ್ ಸಹ ನೀಡಿದ್ದರು. ಆದರೆ ಇದಕ್ಕೆ ಕ್ಯಾರೆ ಅನ್ನದೇ ರಸ್ತೆಗಳಲ್ಲಿ ಓಡಾಡುವಾಗ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿ ನೇಣಿಗೆ ಶರಣಾದ ನಂತರ ಆಕೆಯ ಪೋಷಕರು ಮಂಜುನಾಥ್ ವಿರುದ್ದ ರಾಮಮೂರ್ತಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Last Updated : May 8, 2019, 8:54 AM IST

ABOUT THE AUTHOR

...view details