ಸಂಗಾರೆಡ್ಡಿ(ತೆಲಂಗಾಣ):ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಪಟ್ಟನಚೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಹಬೂಬ್ ಎನ್ನುವ ವ್ಯಕ್ತಿಯನ್ನು ಅರ್ಷದ್ ಹುಸೇನ್ ಎಂಬುವವನ ಸಹಚರ ಎಂದು ಹೇಳಲಾಗುತ್ತಿರುವ ವ್ಯಕ್ತಿ ದಾರುಣವಾಗಿ ಹತ್ಯೆ ಎಸೆಗಿದ್ದಾನೆ.
ಬೈಕಿನಲ್ಲಿ ಬಂದಿಳಿದ ದುಷ್ಕರ್ಮಿ ವಾಹನಗಳು ಸಂಚರಿಸುತ್ತಿರುವ ವೇಳೆಯಲ್ಲೇ ನಡುರಸ್ತೆಯಲ್ಲೇ ಮೆಹಬೂಬ್ನನ್ನು ಬೀಳಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಅರ್ಷದ್ ಹುಸೇನ್ ಹತ್ಯೆಯಲ್ಲಿ ಮೆಹಬೂಬ್ ಎ ಒನ್ ಆರೋಪಿಯಾಗಿದ್ದ. ಇದೇ ಪ್ರಕರಣದಲ್ಲಿ ಇಂದು ಮೆಹಬೂಬ್ ಕೋರ್ಟ್ಗೆ ಹಾಜರಾಗಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.