ಕುವೈತ್:ಈ ಬಾರಿಯ ಬೇಸಿಗೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಗಣನೀಯ ಏರಿಕೆ ಕಂಡಿತ್ತು. ಈ ವಿಚಾರದಲ್ಲಿ ಕರ್ನಾಟಕವೂ ಸೇರಿತ್ತು. ಬಿಸಿಲಿನ ಧಗೆಗೆ ಹತ್ತಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ದೇಶದಲ್ಲೇ ಗರಿಷ್ಠ(50.8ಡಿಗ್ರೀ ಸೆಲ್ಸಿಯಸ್) ತಾಪಮಾನ ದಾಖಲಾಗಿತ್ತು.
ಭಾರತವೇ ಬೆಂಕಿಯುಂಡೆಯಂತಾಗಿದೆ ಎನ್ನುವ ಮಂದಿಗೆ ಈ ಸುದ್ದಿ ಮತ್ತಷ್ಟು ಬೆವರು ಹರಿಸುವಲ್ಲಿ ಸಂಶಯವಿಲ್ಲ. ಮುಸ್ಲಿಂ ದೇಶವಾದ ಕುವೈತ್ ಅಕ್ಷರಶಃ ಬೆಂಕಿಯಲ್ಲಿ ಬೇಯುತ್ತಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈತ್ ನಲ್ಲಿ ಜೂನ್ 8ರಂದು ಬರೋಬ್ಬರಿ 63 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ..!
ಕುವೈತ್ನಲ್ಲಿ ದಾಖಲಾಗಿರುವ ಈ ತಾಪಮಾನ ವಿಶ್ವದಲ್ಲೇ ಗರಿಷ್ಠ ಎನ್ನಲಾಗಿದೆ. ಅತ್ತ ಪ್ರಮುಖ ತೈಲ ಉತ್ಪನ್ನ ರಾಷ್ಟ್ರ ಸೌದಿ ಅರೇಬಿಯಾದಲ್ಲೂ ಪರಿಸ್ಥಿತಿ ಹೆಚ್ಚೇನು ಭಿನ್ನವಾಗಿಲ್ಲ. ಸೌದಿ ಅರೇಬಿಯಾದ ಮಂದಿ 55 ಡಿಗ್ರೀ ಸೆಲ್ಸಿಯಸ್ ಉಷ್ಣಾಂಶದಲ್ಲಿ ಜೀವನ ಸಾಗಿಸುತ್ತಿದ್ದಾರೆ.