ಕರ್ನಾಟಕ

karnataka

ETV Bharat / briefs

ಐಟಿ ದಾಳಿ ಬಳಿಕ ಕಾಂಗ್ರೆಸ್​-ಜೆಡಿಎಸ್​ ನಾಯಕರು ಅಸಭ್ಯವಾಗಿ ವರ್ತನೆ:ಕುಮಾರ್​ ಬಂಗಾರಪ್ಪ ಟೀಕೆ

ಗಡಿಯಲ್ಲಿ ನಡೆದ ಸರ್ಜಿಕಲ್ ದಾಳಿಯನ್ನು ಯೋಧರ ದಾಳಿ ಎನ್ನುತ್ತಾರೆ. ಉಪಗ್ರಹಗಳ ಮೇಲೆ ನಡೆದ ದಾಳಿಯನ್ನು ವಿಜ್ಞಾನಿಗಳ ದಾಳಿ ಎನ್ನುತ್ತಾರೆ. ಆದರೆ ಐಟಿ ದಾಳಿಗೆ ಮಾತ್ರ ಯಾಕೆ ಮೋದಿ ದಾಳಿ ಎನ್ನಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು.

By

Published : Mar 30, 2019, 1:44 AM IST

Updated : Mar 30, 2019, 7:00 AM IST

ಕುಮಾರ್​ ಬಂಗಾರಪ್ಪ ಆಕ್ರೋಶ

ಶಿವಮೊಗ್ಗ:ರಾಜ್ಯದಲ್ಲಿ ಐಟಿ ದಾಳಿ ನಡೆದ ನಂತರ ಕಾಂಗ್ರೆಸ್-ಜೆಡಿಎಸ್ ನಾಯಕರು, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸೊರಬ ಶಾಸಕ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಕುಮಾರ್​ ಬಂಗಾರಪ್ಪ ಆಕ್ರೋಶ

ಗಡಿಯಲ್ಲಿ ನಡೆದ ಸರ್ಜಿಕಲ್ ದಾಳಿಯನ್ನು ಯೋಧರ ದಾಳಿ ಎನ್ನುತ್ತಾರೆ. ಉಪಗ್ರಹಗಳ ಮೇಲೆ ನಡೆದ ದಾಳಿಯನ್ನು ವಿಜ್ಞಾನಿಗಳ ದಾಳಿ ಎನ್ನುತ್ತಾರೆ ಐಟಿ ದಾಳಿಗೆ ಮಾತ್ರ ಯಾಕೆ ಮೋದಿ ದಾಳಿ ಎನ್ನಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು.

ದೇಶದ ವ್ಯವಸ್ಥೆಗಳ ಕುರಿತು ರಾಜ್ಯದ ಸಿಎಂ, ಸಚಿವರು, ಮುಖಂಡರಿಗೆ ಮನವರಿಕೆ ಆಗುತ್ತಿಲ್ಲ. ಮಂಡ್ಯ, ಹಾಸನ ತುಮಕೂರು ಮೂರು ಕ್ಷೇತ್ರದ ಬಿಸಿ ಅವರಿಗೆ ಶುರುವಾಗಿದೆ. ಸುಮಲತಾ ಹೆಸರು ಕೇಳಿದ್ರೆ ಅವರಿಗೆ ನಿದ್ದೆ ಬರುತ್ತಿಲ್ಲ. ಮಂಡ್ಯದಲ್ಲಿ ಮೂರು ಜನ ಸುಮಲತಾರನ್ನು ಚುನಾವಣೆಯಲ್ಲಿ ಸ್ಪರ್ಧೆಗಿಳಿಸುವ ಮೂಲಕ ಅಸಹ್ಯ ರಾಜಕಾರಣ ಮಾಡುತ್ತಿದ್ದು, ಸುಮಲತಾರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಇದಾಗಿದೆ ಎಂದು ಟೀಕಿಸಿದರು.

Last Updated : Mar 30, 2019, 7:00 AM IST

ABOUT THE AUTHOR

...view details