ತುಮಕೂರು: ಜಿಲ್ಲೆಯ ಪಾಲಿನ ಹೇಮಾವತಿ ನದಿ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನರು, ಜಾನುವಾರುಗಳು, ಜಲಚರ ಪ್ರಾಣಿಗಳು ನೀರಿಲ್ಲದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಲಿ, ಶಾಸಕರೇ ಆಗಲಿ ಇಂತಹ ಬರಗಾಲದ ಸಂದರ್ಭದಲ್ಲಿ ವಿಶ್ರಾಂತಿಗೆಂದು ರೆಸಾರ್ಟ್ನಲ್ಲಿ ತಂಗುವ ಸಮಯವಲ್ಲ. ರಾಜ್ಯ ಸರ್ಕಾರ ಸತ್ತು ಹೋಗಿದೆ. ವಿರೋಧ ಪಕ್ಷ ನಿದ್ರಿಸುತ್ತಿದೆ ಎಂದು ಟೀಕಿಸಿದರು. ಹೇಮಾವತಿ ನಾಲೆಯಲ್ಲಿ ಸರಾಗವಾಗಿ ನೀರು ಹರಿಯದ ಕಾರಣ ನಾಲೆಯಲ್ಲಿನ ಕಸ ತೆಗೆದು ಹೂಳು ಎತ್ತುವ ಕಾರ್ಯವನ್ನು ಸರ್ಕಾರ ಕೂಡಲೇ ಮಾಡಬೇಕು.
ತುಮಕೂರಿನ ಕಾಲುವೆಗಳಿಗೆ ಹೇಮಾವತಿ ನದಿ ನೀರು ಹರಿಸುವಲ್ಲಿ ಸರ್ಕಾರ ವಿಫಲ: ಸೊಗಡು ಶಿವಣ್ಣ
ತುಮಕೂರಿನ ಕಾಲುವೆಗಳಿಗೆ ಹೇಮಾವತಿ ನದಿ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ಸೊಗಡು ಶಿವಣ್ಣ
ಜೂನ್ 10ರೊಳಗೆ ಹೂಳು ಎತ್ತುವ ಕಾರ್ಯವನ್ನು ಸರ್ಕಾರ ಆರಂಭಿಸದಿದ್ದರೆ ಹೋರಾಟ ಆರಂಭಿಸುವುದು ಅನಿವಾರ್ಯ ಎಂದರು. ನನ್ನ ಅವಧಿಯಲ್ಲಿ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಹೇಮಾವತಿ ನದಿ ನೀರು ಹರಿಸಿ, ಕೆರೆಗಳನ್ನು ತುಂಬಿಸುವ ಮೂಲಕ ನೀರಿನ ಸಮಸ್ಯೆ ಇಲ್ಲದಂತೆ ಮಾಡಲಾಗಿತ್ತು. ಆದರೆ ಈಗ ಜಿಲ್ಲೆಯ ಪಾಲಿನ ನೀರು ಹರಿಯುತ್ತಿಲ್ಲ. ಸರ್ಕಾರ ಹಾಸನಕ್ಕೆ ಮಾತ್ರ ನೀರು ಎನ್ನುವಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
TAGGED:
Press meet