ಹೈದರಾಬಾದ್: 12 ನೇ ಆವೃತ್ತಿಯ 48 ನೇ ಪಂದ್ಯದಲ್ಲಿ ಟಾಸ್ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ಆಯ್ದುಕೊಂಡಿದೆ.
ಪ್ಲೆ ಆಫ್ ಮೇಲೆ ಕಣ್ಣಿಟ್ಟಿರುವ ತಂಡಗಳಾದ ಸನ್ರೈರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಇಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಮುಖಾಮುಖಿಯಾಗುತ್ತಿದ್ದು, 12ನೇ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಹಾಗೂ 6 ಸೋಲು ಕಂಡಿರುವ ಸನ್ರೈಸರ್ ಹಾಗೂ ಪಂಜಾಬ್ ತಂಡಗಳಿಗೆ ಈ ಪಂದ್ಯ ಪ್ಲೇ ಆಫ್ ದೃಷ್ಟಿಯಿಂದ ಪ್ರಮುಖವಾಗಿದೆ.