ಕರ್ನಾಟಕ

karnataka

ETV Bharat / briefs

ಇಂಡಿಯಾ ಓಪನ್​: ಫೈನಲ್​ ಪ್ರವೇಶಿಸಿದ ಕಿಡಂಬಿ ಶ್ರೀಕಾಂತ್​

ಭಾರತದ ನಂ1 ಬ್ಯಾಡ್ಮಿಂಟನ್​ ಆಟಗಾರ ಶ್ರೀಕಾಂತ್​ ಇಂದು ನಡೆದ ಇಂಡಿಯಾ ಓಪನ್​​ ಸೆಮಿಫೈನಲ್​ ಪಂದ್ಯದಲ್ಲಿ ಚೈನಾದ  ಹುವಾಂಗ್​​ ಯುಕ್ಷಿಯಾಂಗ್​ ಅವರನ್ನು 14-21,21-16,21-19 ರಲ್ಲಿ ಮಣಿಸುವ ಮೂಲಕ 17 ತಿಂಗಳ  ನಂತರ ಟೂರ್ನಿಯೊಂದರಲ್ಲಿ  ಫೈನಲ್​  ಪ್ರವೇಶ ಪಡೆದಿದ್ದಾರೆ.

ಶ್ರೀಕಾಂತ್​

By

Published : Mar 30, 2019, 5:48 PM IST

Updated : Mar 30, 2019, 6:20 PM IST

ನವದೆಹಲಿ: ಮಾಜಿ ಚಾಂಪಿಯನ್​ ಕಿಡಂಬಿ ಶ್ರೀಕಾಂತ್​ ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ​ ಓಪನ್​ ನಲ್ಲಿ ಫೈನಲ್​ ಪ್ರವೇಶಿಸಿದ್ದಾರೆ.

ಇಂದು ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಚೈನಾದ ಹುವಾಂಗ್​​ ಯುಕ್ಷಿಯಾಂಗ್​ ಅವರನ್ನು 14-21,21-16,21-19 ರಲ್ಲಿ ಮಣಿಸುವ 17 ತಿಂಗಳ ನಂತರ ಟೂರ್ನಿಯೊಂದರಲ್ಲಿ ಫೈನಲ್​ ಪ್ರವೇಶ ಪಡೆದಿದ್ದಾರೆ.

ಮೊದಲ ಸೆಟ್​ಅನ್ನು 14-21 ರಲ್ಲಿ ಕಳೆದುಕೊಂಡರು ಛಲದಿಂದ ಹೋರಾಡಿ ಎರಡನೇ ಸೆಟ್​ನಲ್ಲಿ 21-16 ರಲ್ಲಿ 2ನೇ ಸೆಟ್​ ಹಾಗೂ ಮೂರನೇ ಸೆಟ್​ನಲ್ಲಿ 21-19 ರಿಂದ ರೋಚಕ ವಾಗಿ ಗೆಲ್ಲುವ ಮೂಲಕ ದೀರ್ಘಸಮಯದ ನಂತರ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಕಿಡಂಬಿ ಶ್ರೀಕಾಂತ್​ ಫೈನಲ್​ನಲ್ಲಿ 2ನೇ ಸೆಮಿಫೈನಲ್​​​ನಲ್ಲಿ ಗೆಲ್ಲುವ ವಿಕ್ಟರ್​ ಅಕ್ಸೆಲ್ಸೆನ್​ ಆಥವಾ ಭಾರತ ಮತ್ತೊಬ್ಬ ಸ್ಟಾರ್​ ಅಟಗಾರರಾದ ಪರುಪಳ್ಳಿ ಕಶ್ಯಪ್​ ಅವರನ್ನು ಎದುರಿಸಲಿದ್ದಾರೆ.

Last Updated : Mar 30, 2019, 6:20 PM IST

ABOUT THE AUTHOR

...view details