ಕಾರ್ಡಿಫ್: ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜಾಸನ್ ರಾಯ್(153) ಸ್ಪೋಟಕ ಶತಕದ ನೆರವಿನಿಂದ ಇಂಗ್ಲೆಂಡ್ 37 ರನ್ಗಳ ಬಬೃಹತ್ ಮೊತ್ತ ಕಲೆ ಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಆಂಗ್ಲರು ಆರಂಭ ಓವರ್ಗಳಲ್ಲಿ ಸ್ಪಿನ್ಗೆ ಆಡಲು ತಿಣುಕಾಡಿದರೂ 5 ಓವರ್ಗಳ ನಂತರ ತಮ್ಮ ಸ್ಪೋಟಕ ಆಟ ಆರಂಭಿಸಿದರು. ಇದರ ಫಲ ಆರಂಬಿಕರಿಂದ ಮೊದಲ ವಿಕೆಟ್ಗೆ 128 ರನ್ಗಳ ಜೊತೆಯಾಟ ಬಂದಿತು.
ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬಾಂಗ್ಲಾ ನಾಯಕ ಮುಷ್ರಫ್ ಮೊರ್ತಾಜಾ 51 ರನ್ಗಳಿಸಿದ್ದ ಬೈರ್ಸ್ಟೋವ್ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು. ನಂತರ ಬಂದ ರೂಟ್ (21) ರಾಯ್ ಜೊತೆಗೂಡಿ 77 ರನ್ಗಳ ಜೊತೆಯಾಟ ನೀಡಿ ಸೈಫುದ್ದೀನ್ ಓವರ್ನಲ್ಲಿ ಬೌಲ್ಡ್ ಆದರು. ನಂತರದ 2 ಓವರ್ಗಳ ಅಂತರದಲ್ಲಿ ರಾಯ್(153) ಕೂಡ ಮೆಹಿದಿ ಹಸನ್ ಬೌಲಿಂಗ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ 4ನೇ ಎಸೆತದಲ್ಲಿ ಕ್ಯಾಚ್ ಔಟ್ ಆದರು.
ನಂತರ ಬಂದ ಮಾರ್ಗನ್ ಜಾಸ್ ಬಟ್ಲರ್ ಜೊತೆಗೂಡಿ 95 ರನ್ಗಳ ಜೊತೆಯಾಟ ನೀಡಿದರು. ಬಟ್ಲರ್ 44 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 64 ಹಾಗೂ ಮಾರ್ಗನ್ 35 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್ 35 ರನ್ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಪ್ಲಂಕೇಟ್ 9 ಎಸೆತಗಳಲ್ಲಿ 27 ಹಾಗೂ ವೋಕ್ಸ್ 8 ಎಸೆಗಳಲ್ಲಿ 18 ರನ್ಗಳಿಸಿ 386 ರನ್ಗಳ ಬೃಹತ್ ಮೊತ್ತಕ್ಕೇರುವಂತೆ ಮಾಡಿದರು.
ಬಾಂಗ್ಲಾಪರ ಮೆಹಿದಿ ಹಸನ್ 2, ಮುಸ್ತಫಿಜುರ್ ರಹಮಾನ್ 1, ಮೊಹಮ್ಮದ್ ಸೈಫುದ್ದೀನ್, ಮುಷ್ರಫೆ ಮೋರ್ಟಾಜ 1 ವಿಕೆಟ್ ಪಡೆದರು. ಬಾಂಗ್ಲದೇಶದ ಎಲ್ಲಾ ಬೌಲರ್ಗಳು 6 ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ರನ್ಬಿಟ್ಟುಕೊಟ್ಟು ದುಬಾರಿಯಾದರು.