ನವದೆಹಲಿ: ಸುರೇಶ್ ರೈನಾ,ವಿರಾಟ್ ಕೊಹ್ಲಿ ನಂತರ ಟಿ20 ಕ್ರಿಕೆಟ್ನಲ್ಲಿ 8000 ರನ್ಗಳಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಡೆಲ್ಲಿ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ 12 ರನ್ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್ನಲ್ಲಿ 8000 ರನ್ ಪೂರೈಸಿದರು. ರೋಹಿತ್ಗೂ ಮೊದಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (8183), ಸುರೇಶ್ ರೈನಾ (8216) 8 ಸಾವಿರ ರನ್ ಪೂರೈಸಿದ್ದರು.
ರೋಹಿತ್ ಚುಟುಕು ಕ್ರಿಕೆಟ್ನಲ್ಲಿ 8000 ರನ್ ಪೂರೈಸಿದ ಭಾರತದ 3 ಹಾಗೂ ವಿಶ್ವದ 8 ನೇ ಬ್ಯಾಟ್ಸ್ಮನ್ ಎನಿಸಿದರು.
ವಿಶ್ವ ಟಿ20 ಕ್ರಿಕೆಟ್ನಲ್ಲಿ ಕ್ರಿಸ್ ಗೇಲ್ 12670 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ನ ಬ್ರೆಂಡಮ್ ಮೆಕ್ಕಲಮ್ 9922 ರನ್ಗಳಿಸಿದ್ದಾರೆ. ಪೊಲಾರ್ಡ್ 9222 , ಪಾಕಿಸ್ತಾನದ ಶೋಯಬ್ ಮಲಿಕ್ 8701 , ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 8516 , ಭಾರತದ ಸುರೇಶ್ ರೈನಾ 8216, ಕೊಹ್ಲಿ 8183, ರೋಹಿತ್ ಶರ್ಮಾ 8018 ರನ್ಗಳಿಸಿದ್ದಾರೆ.