ನವದೆಹಲಿ:ಮಂಕಡ್ ರನೌಟ್ ಮೂಲಕ ಈ ಆವೃತ್ತಿಯಲ್ಲಿ ಸುದ್ದಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್.ಅಶ್ವಿನ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನೆನಪಿಸಿದ್ದಾರೆ.
ತವರು ನೆಲದಲ್ಲಿ ಪಂಜಾಬ್ ತಂಡವನ್ನು ಎದುರಿಸಿದ ಡೆಲ್ಲಿ ಟೀಮ್ಗೆ ಆರ್.ಅಶ್ವಿನ್ ಮತ್ತೆ ಚಮಕ್ ನೀಡಿದ್ದಾರೆ. ನಾನ್ ಸ್ಟ್ರೈಕ್ನಲ್ಲಿದ್ದ ಶಿಖರ್ ಧವನ್ ಇದಕ್ಕೆ ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.
13ನೇ ಒವರ್ ಬೌಲ್ ಮಾಡಲು ಬಂದ ಆರ್.ಅಶ್ವಿನ್ ಕೊನೇ ಕ್ಷಣದಲ್ಲಿ ಚೆಂಡೆಸೆಯದೇ ತಿರುಗಿದರು. ಆದರೆ ಧವನ್ ಕ್ರೀಸ್ನಿಂದ ಕದಲಿರಲಿಲ್ಲ.
ಮತ್ತೆ ಬೌಲಿಂಗ್ ಮಾಡಲು ಬಂದ ಆಶ್ವಿನ್ ಈ ಬಾರಿ ಬೌಲ್ ಮಾಡುತ್ತಾರೆ. ಈ ಬಾರಿ ಧವನ್ ಕ್ರೀಸ್ನಲ್ಲಿ ಮೈ ಕುಣಿಸುತ್ತಾ ಅಶ್ವಿನ್ರನ್ನು ಅಣಕಿಸುವ ಪ್ರಯತ್ನ ಮಾಡಿದ್ದಾರೆ. ಇದು ನೋಡುಗರಿಗೆ ಉತ್ತಮ ರಂಜನೆ ನೀಡಿದ್ದಂತು ಸುಳ್ಳಲ್ಲ. ಕೆಲ ದಿನದ ಹಿಂದೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮಂಕಡ್ ರನೌಟ್ ಅನ್ನು ಅಣಿಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.