ಕರ್ನಾಟಕ

karnataka

ETV Bharat / briefs

ಕಿಂಗ್ಸ್​ಗಳ ನಡುವಿನ ಪಂದ್ಯದಲ್ಲಿ 22 ರನ್​ಗಳ​ ಜಯ ಸಾಧಿಸಿದ ಚೆನ್ನೈ - ಚೆನ್ನೈ ಸೂಪರ್​ ಕಿಂಗ್ಸ್

ಧೋನಿ, ಪ್ಲೆಸಿಸ್​ ಹಾಗೂ ಹರಭಜನ್​ರ ಅನುಭವದ ಮುಂದೆ ಮಂಕಾದ ಕಿಂಗ್ಸ್​ ಇಲೆವೆನ್​ ಉತ್ತಮ ಆರಂಭ ಪಡೆದು ಕೊನೆಯ ಹಂತದಲ್ಲಿ ಎಡವಿ 22 ರನ್​ಗಳ ಸೋಲನುಭವಿಸಿದೆ. ಗೆದ್ದ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಮರಳಿ ಪಡೆದಿದೆ.

ಚೆನ್ನೈ

By

Published : Apr 6, 2019, 8:43 PM IST

ಚೆನ್ನೈ: ಪ್ಲೆಸಿಸ್​, ಧೋನಿ ಬ್ಯಾಟಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ 22 ರನ್​ಗಳ ಗೆಲುವು ದಾಖಲಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 160 ರನ್​ ಗಳಿಸಿತು. ಈ ಆವೃತ್ತಿಯಲ್ಲಿ ಚೊಚ್ಚಲ ಪಂದ್ಯವಾಡಿದ ಆಫ್ರಿಕಾದ ಡು ಪ್ಲೆಸಿಸ್​ 38 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ನಾಯಕ ಧೋನಿ ಕೊನೆಯಲ್ಲಿ ಮತ್ತೊಮ್ಮೆ ತಮ್ಮ ಬಲಿಷ್ಠ ಹೊಡೆತಗಳಿಂದ 23 ಎಸೆತಗಳಲ್ಲಿ 37 ರನ್ ​ಗಳಿಸಿ 160 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಪಂಜಾಬ್​ ಪರ ನಾಯಕ ಆರ್. ಅಶ್ವಿನ್​ 23 ರನ್​ ನೀಡಿ 3 ವಿಕೆಟ್​ ಪಡೆದರು.

161 ರನ್​ಗಳ ಗುರಿ ಪಡೆದ ಪಂಜಾಬ್​ ಕೇವಲ 7 ರನ್ ​ಗಳಿಸುವಷ್ಟರಲ್ಲಿ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಧೋನಿಯ ಚಾಣಾಕ್ಷ ನಾಯಕತ್ವದಿಂದ ಶಾರ್ದುಲ್​ ಬದಲು ಕಣಕ್ಕಿಳಿದಿದ್ದ ಹರಭಜನ್​ ಈ ಇಬ್ಬರು ದಾಂಡಿಗರನ್ನು ಪೆವಿಲಿಯನ್​ಗಟ್ಟಿದರು.

ನಂತರ ಒಂದಾದ ರಾಹುಲ್​(55), ಸರ್ಫರಾಜ್​ ಖಾನ್​(67) 3ನೇ ವಿಕೆಟ್​ಗೆ 110 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡದರಾದರು ತಾಳ್ಮೆಯ ಆಟಕ್ಕೆ ಒತ್ತು ಕೊಟ್ಟು ರನ್ ​ರೇಟ್​ ಗತಿ ಏರಿಸಿಕೊಂಡರು.

ಇದರಿಂದ ಕೊನೆಯ 3 ಓವರ್​ಗಳಲ್ಲಿ ಗುರಿ ತಲುಪಲು 48 ರನ್​ ಗಳಿಸಬೇಕಾಗಿತ್ತು. ಆದರೆ ಉತ್ತಮ ಬೌಲಿಂಗ್​ ನಡೆಸಿದ ಚಹಾರ್​ ಹಾಗೂ ಸ್ಕಾಟ್​ ಕಗ್ಲಿಜನ್​ ಇಬ್ಬರ ವಿಕೆಟ್​ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. ಡೇವಿಡ್​ ಮಿಲ್ಲರ್​ ಕೇವಲ 6 ರನ್ ​ಗಳಿಸಿ ಚಹಾರ್​ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆಗುವ ಮೂಲಕ ಪಂಜಾಬ್​ ಗೆಲುವಿನ ಆಸೆಗೆ ಎಳ್ಳುನೀರು ಬಿಟ್ಟರು.

ABOUT THE AUTHOR

...view details