ಕರ್ನಾಟಕ

karnataka

ETV Bharat / briefs

ಕಿವೀಸ್​ ಕಿವಿ ಹಿಂಡಲು ಕೊಹ್ಲಿ ಟೀಂ ರೆಡಿ, ಇನ್ನಿಂಗ್ಸ್​​ ಆರಂಭಿಸಲಿರುವ ಕನ್ನಡಿಗ! - ವಿಶ್ವಕಪ್​

ವಿಶ್ವಕಪ್​ನಲ್ಲಿ ಮೊದಲ ಮೂರು ಪಂದ್ಯಗಳನ್ನು ಏಷ್ಯಾದ ತಂಡಗಳ ವಿರುದ್ಧವೇ ಆಡಿರುವ ನ್ಯೂಜಿಲೆಂಡ್​ ತಂಡ ಸತತ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಎದುರಿಸುತ್ತಿದೆ.

India vs New Zealand

By

Published : Jun 12, 2019, 9:39 PM IST

ಟೌಂಟನ್​: 12ನೇ ಆವೃತ್ತಿಯಲ್ಲಿ ಸೋಲೇ ಕಾಣದ 2 ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್​ ನಾಳೆ ನಾಟಿಂಗ್​​ಹ್ಯಾಮ್​ನಲ್ಲಿ ಮುಖಾಮುಖಿಯಾಗಲಿವೆ.

ವಿಶ್ವಕಪ್​ನಲ್ಲಿ ಮೊದಲ ಮೂರು ಪಂದ್ಯಗಳನ್ನು ಏಷ್ಯಾದ ತಂಡಗಳ ವಿರುದ್ಧವೇ ಆಡಿರುವ ನ್ಯೂಜಿಲೆಂಡ್‌ ತಂಡ ಸತತ ನಾಲ್ಕನೇ ಪಂದ್ಯದಲ್ಲಿ ಏಷ್ಯಾದ ಬಲಿಷ್ಠ ತಂಡವಾದ ಭಾರತವನ್ನು ಎದುರಿಸುತ್ತಿದೆ.

ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಕೇವಲ 136 ರನ್​ಗಳಿಗೆ ಆಲೌಟ್​ ಮಾಡಿ 10 ವಿಕೆಟ್​ಗಳಿಂದ ಜಯ ಸಾಧಿಸಿತ್ತು. ನಂತರ ಬಾಂಗ್ಲಾದೇಶದ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದರೆ, ಅಫ್ಘಾನಿಸ್ತಾನದ ವಿರುದ್ಧ 7 ವಿಕೆಟ್​ಗಳ ಗೆಲುವು ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ನ್ಯೂಜಿಲೆಂಡ್‌ ತಂಡದ ಆಟಗಾರರು

ಗಪ್ಟಿಲ್​, ಮನ್ರೋ,ವಿಲಿಯಮ್ಸನ್​ ಹಾಗೂ ಟೇಲರ್​ ಬ್ಯಾಟಿಂಗ್​ ವಿಭಾಗದ ಶಕ್ತಿಗಳಾಗಿದ್ದರೆ, ಕಳೆದ ಮೂರು ಪಂದ್ಯಗಳಲ್ಲಿ ಟ್ರೆಂಟ್​ ಬೌಲ್ಟ್​, ಮ್ಯಾಟ್​ ಹೆನ್ರಿ ಹಾಗೂ ನಿಶಾಮ್​ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ.​ ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಮಣಿಸಿದ ವಿಶ್ವಾಸದಲ್ಲಿರುವ ಕಿವೀಸ್​ ನಾಳಿನ ಪಂದ್ಯದಲ್ಲೂ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ.

ಭಾರತ ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡವನ್ನು ಬಗ್ಗುಬಡಿದಿದೆ. ನಾಳಿನ ಪಂದ್ಯದಲ್ಲಿ ಕಿವೀಸ್​ ವಿರುದ್ಧವೂ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಧವನ್​ ಅನುಪಸ್ಥಿತಿ ತಂಡವನ್ನು ಕೊಂಚ ಕಾಡಲಿದೆ. ಇನ್ನುಳಿದಂತೆ ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರೋಹಿತ್​, ಕೊಹ್ಲಿ, ಬುಮ್ರಾ, ಚಹಾಲ್, ಭುವನೇಶ್ವರ್​ ಹಾಗೂ ಧೋನಿ ಕಿವೀಸ್​ ವಿರುದ್ಧವೂ ತಮ್ಮ ಫಾರ್ಮ್ ಮುಂದುವರಿಸಲು ಕಾತರದಿಂದಿದ್ದಾರೆ.

ಆರಂಭಿಕನಾಗಿ ಕಣಕ್ಕಿಳಿಯಲಿರುವ ಕನ್ನಡಿಗ ಕೆ.ಎಲ್‌ ರಾಹುಲ್​

ವಿಶ್ವಕಪ್​ ಮುಖಾಮುಖಿ:

ಭಾರತದ ವಿರುದ್ಧ 7 ಪಂದ್ಯಗಳನ್ನಾಡಿರುವ ಕಿವೀಸ್​ 1975,1979,1992, ಹಾಗೂ 1999ರ ವಿಶ್ವಕಪ್​ನಲ್ಲಿ ಜಯ ಸಾಧಿಸಿದ್ದರೆ, ಭಾರತ ತಂಡ 1987ರಲ್ಲಿ 2 ಬಾರಿ ಹಾಗೂ 2003ರಲ್ಲಿ ಒಮ್ಮೆ ನ್ಯೂಜಿಲೆಂಡ್​ ತಂಡವನ್ನು ಮಣಿಸಿದೆ. 2003ದಿಂದೀಚೆಗೆ ಇದೇ ಮೊದಲ ಬಾರಿಗೆ ಇತ್ತಂಡಗಳು ಮುಖಾಮುಖಿಯಾಗುತ್ತಿವೆ.

ಸಂಭಾವ್ಯ ತಂಡಗಳ ವಿವರ

ಭಾರತ:

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಕೆ ಎಲ್ ರಾಹುಲ್, ಎಂ ಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ವಿಜಯ್​ ಶಂಕರ್​

ನ್ಯೂಜಿಲೆಂಡ್:

ಕೇನ್​ ವಿಲಿಯಮ್ಸನ್​ (ನಾಯಕ), ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲಾಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಮಿಚೆಲ್​ ಸ್ಯಾಂಟ್ನರ್​, ರಾಸ್​ ಟೇಲರ್​.

ABOUT THE AUTHOR

...view details