ನವದೆಹಲಿ:ಪ್ರಜಾತಂತ್ರ ವ್ಯವಸ್ಥೆಯ ಅತಿದೊಡ್ಡ ಹಬ್ಬ ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ಕ್ಷಣಗನೆ ಆರಂಭವಾಗಿದೆ.
ಏಪ್ರಿಲ್ 18ರಂದು 12 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 95 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 15.79 ಕೋಟಿ ಮತದಾರರು 1629 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

39 ಕ್ಷೇತ್ರ ಹೊಂದಿರುವ ತಮಿಳುನಾಡು ಎರಡನೇ ಹಂತದ ಮತದಾನದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ರಾಜ್ಯವಾಗಿದೆ. ವೆಲ್ಲೂರು ಕ್ಷೇತ್ರದ ಮತದಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇನ್ನುಳಿದಂತೆ ಕರ್ನಾಟಕದ ಹದಿನಾಲ್ಕು ಕ್ಷೇತ್ರಗಳು, ಮಹಾರಾಷ್ಟ್ರದ ಹತ್ತು ಹಾಗೂ ಉತ್ತರ ಪ್ರದೇಶದ ಎಂಟು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಸುವ್ಯವಸ್ಥಿತ ಮತದಾನಕ್ಕಾಗಿ ಆಯೋಗ ಹೆಚ್ಚಿನ ಆಸ್ಥೆ ವಹಿಸಿದ್ದು, ಒಟ್ಟಾರೆ 1,81,535 ಬೂತ್ಗಳನ್ನು ತೆರೆದಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.