ಬಿಶ್ಕೆಕ್(ಕಿರ್ಗಿಸ್ತಾನ):ಶಾಂಘೈ ಶೃಂಗಸಭೆಯ ಎರಡನೇ ಹಾಗೂ ಅಂತಿಮ ದಿನವಾದ ಇಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಗುಡುಗಿದ್ದಾರೆ.
ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲ ನಾಯಕರು ಒಗ್ಗೂಡಬೇಕು, ಉಗ್ರವಾದವನ್ನು ಹಿಮ್ಮೆಟ್ಟಿಸುವ ಕುರಿತಾಗಿ ಜಾಗತಿಕ ಸಭೆಯ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಇಮ್ರಾನ್ ಜೊತೆ ಮುನಿಸು, ಜಿನ್ಪಿಂಗ್ ಜೊತೆ ಮಾತು... ಪಾಕ್ ಉಗ್ರವಾದ ಪ್ರಸ್ತಾಪಿಸಿದ ಮೋದಿ
ಮೋದಿ ಹೇಳಿದ HEALTH ಮಂತ್ರ:
ಸಭೆಯಲ್ಲ ಮಾತನಾಡಿದ ಮೋದಿ ಪ್ರಮುಖವಾಗಿ HEALTH ಎನ್ನುವ ಪದವನ್ನು ಉಲ್ಲೇಖಿಸಿದ್ದು, ಗಮನ ಸೆಳೆಯಿತು. HEALTH ಪದದ ವಿಸ್ತೃತ ರೂಪ ಇಂತಿದೆ..
- H-Health & medicare copperation(ಆರೋಗ್ಯ ಮತ್ತು ವೈದ್ಯಕೀಯ ಸಹಕಾರ)
- E- Eco cooperation(ಪರಿಸರ ಸಹಕಾರ)
- A-Alternate connectivity via waterways(ಜಲಮಾರ್ಗಗಳ ಮೂಲಕ ಪರ್ಯಾಯ ಸಂಪರ್ಕ)
- L-literature promotion(ಸಾಹಿತ್ಯ ಪ್ರಚಾರ)
- T-terrorism free society(ಭಯೋತ್ಪದನಾ ರಹಿತ ಸಮಾಜ ನಿರ್ಮಾಣ)
- H-humanitrian cooperation(ಮಾನವೀಯ ಸಹಕಾರ)
ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಭಾಗವಹಸಿದ್ದು, ಮೋದಿ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಉಭಯ ದೇಶಗಳ ಪ್ರಧಾನಿಗಳ ನಡುವೆ ಹಸ್ತಲಾಘವ ನಡೆಸದಿರುವುದು ಭಯೋತ್ಪಾದನೆ ವಿಚಾರದಲ್ಲಿ ಭಾರತ ತನ್ನ ನಿಲುವಿಗೆ ಬದ್ಧ ಎನ್ನುವುದನ್ನು ಸಾರಿ ಹೇಳಿದೆ.