ಕರ್ನಾಟಕ

karnataka

ETV Bharat / briefs

ಕಾಫಿನಾಡಿನಲ್ಲಿ ಮರಳು ಮಾಫಿಯಾ... ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ - ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

ಲಾರಿ, ಟ್ರ್ಯಾಕ್ಟರ್ ಮೂಲಕ ರಾಜಕಾರಣಿಗಳ ಬೆಂಬಲಿಗರು ಮರಳು ಸಾಗಾಟ ಮಾಡುತ್ತಿದ್ದಾರೆ. ಹಿಟಾಚಿಯಿಂದ ಲೋಡ್ ಮಾಡಿ ಹತ್ತಾರು ಲಾರಿ ಮರಳು ಸಾಗಾಟ ನಡೆಸುತ್ತಿದ್ದು, ಅಕ್ರಮ ಮರಳು ಸಾಗಣೆ ನೋಡಿಕೊಂಡು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿದೆ.

illigal sand mafia
illigal sand mafia

By

Published : Apr 29, 2021, 7:46 PM IST

Updated : Apr 29, 2021, 10:45 PM IST

ಚಿಕ್ಕಮಗಳೂರು:ಕಾಫಿನಾಡಿನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲೂ ಮರಳು ಮಾಫಿಯಾ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾಫಿನಾಡಿನಲ್ಲಿ ಮರಳು ಮಾಫಿಯಾ... ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

ಅಕ್ರಮವಾಗಿ ಮರಳು ಸಾಗಣೆಯನ್ನು ದಂಧೆಕೋರರು ನಡೆಸುತ್ತಿದ್ದು, ರಾಜಕಾರಣಿಗಳ ಹೆಸರು ಹೇಳಿಕೊಂಡು ಮರಳು ದಂಧೆಕೋರರು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಲಾರಿ, ಟ್ರ್ಯಾಕ್ಟರ್ ಮೂಲಕ ರಾಜಕಾರಣಿಗಳ ಬೆಂಬಲಿಗರು ಮರಳು ಸಾಗಾಟ ಮಾಡುತ್ತಿದ್ದಾರೆ. ಹಿಟಾಚಿಯಿಂದ ಲೋಡ್ ಮಾಡಿ ಹತ್ತಾರು ಲಾರಿ ಮರಳು ಸಾಗಾಟ ನಡೆಸುತ್ತಿದ್ದು, ಅಕ್ರಮ ಮರಳು ಸಾಗಣೆ ನೋಡಿಕೊಂಡು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿದೆ.

ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ಮಾಫಿಯಾ ನಡೆಯುತ್ತಿದ್ದು, ಇಂತಹ ಘಟನೆ ನಡೆದರೂ ಪೊಲೀಸರು ಮಾತ್ರ ಸ್ಥಳಕ್ಕೆ ಆಗಮಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Last Updated : Apr 29, 2021, 10:45 PM IST

ABOUT THE AUTHOR

...view details