ಕಾರ್ಡಿಫ್(ಲಂಡನ್):ಐಸಿಸಿ ವಿಶ್ವಕಪ್ನ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ- ಅಫ್ಘಾನಿಸ್ತಾನ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಹರಿಣಗಳ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಉಭಯ ತಂಡಗಳು ಗೆಲುವಿನ ಯೋಜನೆಯೊಂದಿಗೆ ಮೈದಾನಕ್ಕಿಳಿದಿವೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಎರಡು ತಂಡಗಳು ಗೆಲುವು ಕಂಡಿಲ್ಲ.
ಆಡುವ ಬಳಗ ಇಂತಿದೆ:
ಅಫ್ಘಾನಿಸ್ತಾನ:ಹಜರತುಲ್ಲಾ ಜಾಝೈ, ನೂರ್ ಅಲಿ ಝದ್ರನ್, ರಹಮತ್ ಷಾ, ಹಶ್ಮಾತುಲ್ಲಾ ಶಾಹಿದ್ದಿ, ಅಸ್ಗರ್ ಆಫ್ಘಾನ್, ಗುಲ್ಬಾದಿನ್ ನ ಯಿಬ್ (ಕ್ಯಾ), ಮೊಹಮ್ಮದ್ ನಬಿ, ಇಕ್ರಮ್ ಅಲಿ ಖಿಲ್ (ವಿ.ಕೀ), ರಶೀದ್ ಖಾನ್, ಅಫ್ತಾಬ್ ಆಲಂ, ಹಮೀದ್ ಹಸನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿ.ಕೀ), ಹಾಶಿಮ್ ಆಮ್ಲಾ, ಮಾರ್ಕ್ರಾಮ್, ಫಾಫ್ ಡು ಪ್ಲೆಸಿಸ್ (ಕ್ಯಾ), ಡೆರ್ ಡಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹಲುಕ್ವೇವೊ, ಕ್ರಿಸ್ ಮೋರಿಸ್, ಕಾಗಿಸೊ ರಾಬಾಡಾ, ಇಮ್ರಾನ್ ತಾಹಿರ್, ಹೆಂಡ್ರಿಕ್ಸ್
ಆಫ್ಘಾನಿಸ್ತಾನ ಟೂರ್ನಿಯಲ್ಲಿ ಇದುವರೆಗೂ ಮೂರು ಪಂದ್ಯಗಳನ್ನಾಡಿದ್ದು ಎಲ್ಲದರಲ್ಲೂ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದೆ. ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ.