ಕರ್ನಾಟಕ

karnataka

ETV Bharat / briefs

ಜೂನ್​ 16ರಂದು ಇಂಡೋ-ಪಾಕ್​​ ಹೈ ವೋಲ್ಟೇಜ್ ಮ್ಯಾಚ್‌: ಕೊಹ್ಲಿ ಹೇಳಿದ್ದೇನು? - ಭಾರತ-ಪಾಕಿಸ್ತಾನ

ಭಾರತ-ನ್ಯೂಜಿಲೆಂಡ್​ ನಡುವಿನ ಪಂದ್ಯ ಮಳೆಗಾಹುತಿಯಾಗಿದ್ದು, ಪಂದ್ಯ ರದ್ಧುಗೊಂಡಿರುವ ಕಾರಣ ನಿರಾಸೆಯಾಗಿದೆ ಎಂದು ನಾಯಕ​​ ಕೊಹ್ಲಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ

By

Published : Jun 13, 2019, 9:45 PM IST

Updated : Jun 13, 2019, 10:49 PM IST

ಲಂಡನ್​​: ಐಸಿಸಿ ಏಕದಿನ ಮಹಾಟೂರ್ನಿಯಲ್ಲಿ ಜೂನ್​ 16ರಂದು ಸಾಂಪ್ರದಾಯಿಕ ಎದುರಾಳಿ ತಂಡ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದಕ್ಕೂ ಮುಂಚಿತವಾಗಿ ಕ್ಯಾಪ್ಟನ್​ ಕೊಹ್ಲಿ ಕೂಡ ಈ ವಿಷಯವಾಗಿ ಮಾತನಾಡಿದ್ದಾರೆ.

ನಾಟಿಂಗ್​ಹ್ಯಾಮ್​​ನಲ್ಲಿ ಇಂದು ಭಾರತ-ನ್ಯೂಜಿಲೆಂಡ್​ ನಡುವೆ ನಡೆಯಬೇಕಾಗಿದ್ದ ಪಂದ್ಯ ಮಳೆಯ ಕಾರಣ ರದ್ಧಾಗಿದೆ. ಇದಾದ ಬಳಿಕ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಪಂದ್ಯ ರದ್ಧಾಗಿರುವುದು ನಿರಾಸೆ ಮೂಡಿಸಿದೆ. ರಭಸವಾಗಿ ಮಳೆ ಸುರಿದ ಕಾರಣ ಮೈದಾನ ಸಂಪೂರ್ಣವಾಗಿ ತೇವವಾಗಿದ್ದು, ಇಲ್ಲಿ ಪ್ಲೇಯರ್ಸ್​ ಮೈದಾನಕ್ಕಿಳಿಯವುದು ಸೇಫ್​ ಅಲ್ಲ. ಜತೆಗೆ ಈ ಸನ್ನಿವೇಶದಲ್ಲಿ ನಮ್ಮ ಆಟಗಾರರು ಫಿಟ್​ ಆಗಿರುವುದು ಕೂಡ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪಾಕಿಸ್ತಾನ ವಿರುದ್ಧದ ಹಣಾಹಣಿ ಬಗ್ಗೆ ಮಾತನಾಡಿರುವ ಕೊಹ್ಲಿ, ಪಾಕ್​ ವಿರುದ್ಧ ಪಂದ್ಯ ಆಡಲು ಮೈದಾನಕ್ಕಿಳಿದಾಗ ಎಲ್ಲವೂ ಶಾಂತವಾಗಿರುತ್ತದೆ. ಬೇರೆ ತಂಡಗಳ ವಿರುದ್ಧ ಆಡುವ ರೀತಿಯಲ್ಲೇ ಈ ಪಂದ್ಯವನ್ನೂ ನಾವು ತೆಗೆದುಕೊಳ್ಳಲಿದ್ದು, ಎಲ್ಲರೂ ವೃತ್ತಿಪರ ಕ್ರಿಕೆಟರುಗಳು ಆಗಿರುವ ಕಾರಣ ತಮ್ಮ ಕರ್ತವ್ಯ ಏನು ಎಂಬುದು ಅವರಿಗೆ ಗೊತ್ತು ಎಂದರು.

ಶಿಖರ್​ ಧವನ್​ ಗಾಯದ ಬಗ್ಗೆ ಮಾಹಿತಿ ನೀಡಿದ ಕೊಹ್ಲಿ, ಹೆಬ್ಬೆರಳಿನ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿರುವ ಅವರು, ಸೆಮಿಫೈನಲ್​ ವೇಳೆಗೆ ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Last Updated : Jun 13, 2019, 10:49 PM IST

ABOUT THE AUTHOR

...view details