ಹೈದರಾಬಾದ್:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈಗಾಗಲೇ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ವಿದಾಯ ಘೋಷಣೆ ಮಾಡಿ ಆಗಿದೆ. ಇದರ ಮಧ್ಯೆ ಮಿ.360 ಅಚ್ಚರಿಯ ಹೇಳಿಕೆವೊಂದನ್ನ ನೀಡಿ ಕ್ರಿಕೆಟ್ ಪ್ರೇಮಿಗಳಲ್ಲಿ ಗೊಂದಲ ಮೂಡಿಸಿದ್ದಾರೆ.
ಧೋನಿ 2023ರ ವಿಶ್ವಕಪ್ ಆಡುವುದಾರೆ, ನಾನು ಕಮ್ಬ್ಯಾಕ್ ಮಾಡುವೆ: ಎಬಿ ಡಿವಿಲಿಯರ್ಸ್ - ಎಬಿ ಡಿವಿಲಿಯರ್ಸ್
ಒಂದು ವೇಳೆ 2023ರ ವಿಶ್ವಕಪ್ನಲ್ಲಿ ಧೋನಿ ಭಾಗಿಯಾದರೇ ನಾನು ಕೂಡ ಕಮ್ಬ್ಯಾಕ್ ಮಾಡುವೆ ಎಂದು ಎಬಿ ಡಿವಿಲಿಯರ್ಸ್ ಹೇಳಿಕೆ ನೀಡಿದ್ದಾರೆ.
2023ರ ಐಸಿಸಿ ವಿಶ್ವಕಪ್ನಲ್ಲಿ ಧೋನಿ ಭಾಗಿಯಾದರೆ ನಾನು ಕೂಡ ವಿಶ್ವಕಪ್ ಆಡಲು ಕಮ್ಬ್ಯಾಕ್ ಮಾಡುವೆ ಎಂದು ಎಬಿಡಿ ಹೇಳಿದ್ದಾರೆ. ಈಗ ನನಗೆ 37 ವರ್ಷ. ಧೋನಿಗೂ ಕೂಡ ಇಷ್ಟೇ ವಯಸ್ಸಾಗಿದೆ. ಒಂದು ವೇಳೆ ಧೋನಿ 2023ರ ವಿಶ್ವಕಪ್ನಲ್ಲಿ ಭಾಗಿಯಾದರೆ ನನ್ನ ವಯಸ್ಸು ಕೂಡ ಧೋನಿಯಷ್ಟು ಆಗಲಿದ್ದು, ನಾನು ಈ ಟೂರ್ನಿಯಲ್ಲಿ ಭಾಗಿಯಾಗುವೆ ಎಂದು ತಿಳಿಸಿದ್ದಾರೆ. 2023ರ ವೇಳೆಗೆ ಧೋನಿಗೆ 39ವರ್ಷ ತುಂಬಲಿದೆ.
ಹೇಳಿಕೆಯ ಮರ್ಮವೇನು!?
ಸುದ್ದಿಗಾರರು ನೀವೂ ಮುಂದಿನ ವಿಶ್ವಕಪ್ಗಾಗಿ ಕಮ್ಬ್ಯಾಕ್ ಮಾಡಲಿದ್ದೀರಾ? ಎಂದು ಪ್ರಶ್ನೆ ಕೇಳಿದಾಗ ಈ ರೀತಿಯಾಗಿ ಹಾಸ್ಯದ ದಾಟಿಯಲ್ಲಿ ಮಿ.360 ಉತ್ತರ ನೀಡಿದ್ದಾರೆ. ಟೀಂ ಇಂಡಿಯಾ ಪರ ವಿಶ್ವಕಪ್ನಲ್ಲಿ ಭಾಗಿಯಾಗಿರುವ ಧೋನಿ ಪಾಲಿಗೆ ಇದು ಕೊನೆಯ ವಿಶ್ವಕಪ್ ಎಂಬ ಮಾತು ಈಗಾಗಲೇ ಕೇಳಿ ಬರುತ್ತಿದೆ. ಅದೇ ವಿಷಯವನ್ನಿಟ್ಟುಕೊಂಡು ಎಬಿಡಿ ಈ ರೀತಿಯ ಹೇಳಿಕೆ ನೀಡಿದ್ದಾರೆ.