ಕರ್ನಾಟಕ

karnataka

ETV Bharat / briefs

ನಾನು ವಾಪಸ್ ಬಂದ್ರೆ ಗಿಣಿರಾಮ ಟ್ರ್ಯಾಕ್‌ಗೆ ಬರ್ತಾನೆ ಎಂದ  ನಯನಾ ನಾಗರಾಜ್ - ಕಲರ್ಸ್ ಕನ್ನಡ ವಾಹಿನಿ

ಸದ್ಯ ನಾನು ಶೂಟಿಂಗ್‌ನಲ್ಲಿ ಭಾಗವಹಿಸದ ಕಾರಣ ಧಾರಾವಾಹಿಯ ಕಥೆಯಲ್ಲಿ ಒಂಚೂರು ಬದಲಾವಣೆ ಮಾಡಲಾಗಿದೆ. ನಾನು ವಾಪಸ್ ಆದ ಬಳಿಕ ಕಥೆ ಟ್ರ್ಯಾಕ್‌ಗೆ ಬರಲಿದೆ ಎಂದಿದ್ದಾರೆ ನಯನಾ ನಾಗರಾಜ್..

nayana nagaraj
nayana nagaraj

By

Published : May 7, 2021, 6:20 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕರ್ನಾಟಕದ ಸೊಬಗಿನ ಗಿಣಿರಾಮ ಧಾರಾವಾಹಿಯಲ್ಲಿ ನಾಯಕಿ ಮಹತಿಯಾಗಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ನಯನಾ ನಾಗರಾಜ್ ಅವರಿಗೆ ಇತ್ತೀಚೆಗಷ್ಟೇ ಕೊರೊನಾ ಪಾಸಿಟಿವ್ ಬಂದಿದ್ದು ಸದ್ಯ ಅವರು ಶೂಟಿಂಗ್‌ನಲ್ಲಿ ಭಾಗವಹಿಸುತ್ತಿಲ್ಲ.

ಸದ್ಯ ಅದಕ್ಕೆ ಅನುಗುಣವಾಗಿ ಕಥೆಯಲ್ಲಿ ಕೊಂಚ ಬದಲಾವಣೆಯನ್ನು ಈಗಾಗಲೇ ತಂಡ ಮಾಡಿಕೊಂಡಿದೆ. ಅಂದರೆ ಪ್ರಸ್ತುತ ಧಾರಾವಾಹಿಯಲ್ಲಿ ನಾಯಕಿ ಮಹತಿ ನಾಪತ್ತೆಯಾಗಿರುತ್ತಾಳೆ.

ಮಾಸ್ಟರ್ ಮಗಳು ಕಾಣೆಯಾಗಿರುವ ವಿಚಾರ ತಿಳಿದು ಟೆನ್ಷನ್ ನಲ್ಲಿರುವ ಶಿವರಾಮು ಆಕೆಯನ್ನು ಹುಡುಕುವುದಕ್ಕಾಗಿ ಹರಸಾಹಸ ಮಾಡುತ್ತಿರುತ್ತಾನೆ.

ಇದೀಗ ಧಾರಾವಾಹಿಯಲ್ಲಿ ಮಹತಿ ಮಿಸ್ ಆಗಿರುವುದನ್ನು ಕಂಡ ವೀಕ್ಷಕರು ನಯನಾ ನಾಗರಾಜ್ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆಯೇ ಎಂದು ಭಾವಿಸಿದ್ದಾರೆ.

ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿರುವ ನಯನಾ ಕೋವಿಡ್ ಕಾರಣದಿಂದ ನಾನು ಈಗಿನ ಸಂಚಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬಹುಶಃ ಇದರಿಂದ ಧಾರಾವಾಹಿಯಿಂದ ನಾನು ಹೊರ ಬಂದಿದ್ದೇನೆ ಎಂದು ಕಿರುತೆರೆ ವೀಕ್ಷಕರು ಆಲೋಚನೆ ಮಾಡಿದ್ದಾರೆ‌.

ಆ ಆಲೋಚನೆ ಅಕ್ಷರಶಃ ತಪ್ಪು. ಈಗಷ್ಟೇ ನಾನು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖಳಾಗುತ್ತಿದ್ದೇನೆ. ನಾನು ಯಾವಾಗ ಸಂಪೂರ್ಣ ಚೇತರಿಸಿಕೊಳ್ಳುತ್ತೇನೋ ಆಗ ಮತ್ತೆ ಶೂಟಿಂಗ್ಗೆ ಹಾಜರಾಗುತ್ತೇನೆ ಎಂದು ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇದರ ಜೊತೆಗೆ ಸದ್ಯ ನಾನು ಶೂಟಿಂಗ್‌ನಲ್ಲಿ ಭಾಗವಹಿಸದ ಕಾರಣ ಧಾರಾವಾಹಿಯ ಕಥೆಯಲ್ಲಿ ಒಂಚೂರು ಬದಲಾವಣೆ ಮಾಡಲಾಗಿದೆ. ನಾನು ವಾಪಸ್ ಆದ ಬಳಿಕ ಕಥೆ ಟ್ರ್ಯಾಕ್‌ಗೆ ಬರಲಿದೆ ಎಂದಿದ್ದಾರೆ ನಯನಾ ನಾಗರಾಜ್.

ABOUT THE AUTHOR

...view details