ಪರ್ತ್: ಭಾರತ ಹಾಕಿ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತನ್ನ ಬುಧವಾರ ಮೊದಲ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಥಂಡರ್‌ಸ್ಟಿಕ್ಸ್ ವಿರುದ್ಧ 2-0ಯಲ್ಲಿ ಗೆಲವು ಸಾಧಿಸಿ ಶುಭಾರಂಭ ಮಾಡಿದೆ.
ಬಿರೇಂದರ್ ಲಕ್ರ ಆಟ ಆರಂಭವಾದ 23 ನೇ ನಿಮಿಷದಲ್ಲಿ ಹಾಗೂ ಹರ್ಮನ್ಪ್ರೀತ್ ಸಿಂಗ್ 50 ನೇ ನಿಮಿಷದಲ್ಲಿ ಗೋಲುಗಳಿಸಿ ತನ್ನ ಪ್ರವಾಸದ ಆರಂಭದ ಪಂದ್ಯದಲ್ಲಿ ಗೆಲುವು ಪಡೆದರು.
ಭಾರತ ತಂಡದ ಅಕ್ಷದೀಪ್ ನಾತ್, ಜಾಸ್ಕರಣ್ ಸಿಂಗ್ ಸೇರದಂತೆ 4 ಆಟಗಾರರು ತಮಗೆ ಸಿಕ್ಕಿದ್ದ ಅವಕಾಶಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಎದುರಾಳಿ ಗೋಲ್ ಕೀಪರ್ ಉತ್ತಮವಾಗಿ ಗೋಲುಗಳನ್ನು ತಡೆಯುವ ಮೂಲಕ ತಮ್ಮ ತಂಡ ಹೀನಾಯ ಸೋಲುಕಾಣುವುದನ್ನು ತಪ್ಪಿಸಿದರು. ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಆಟಗಾರರರು ಎಷ್ಟೇ ಪ್ರಯತ್ನ ಪಟ್ಟರು ಭಾರತ ರಕ್ಷಣಾ ಕೋಟೆಯನ್ನು ಬೇಧಿಸಿ ಗೋಲು ಗಳಿಸಲು ವಿಫಲರಾದರು.
ಭಾರತ ತಂಡ ಮೇ 15 ಹಾಗೂ ಮೇ17 ರಂದು ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ತಂಡವನ್ನು ಎದುರಿಸಲಿದೆ.