ಮುಂಬೈ:ವಿಶ್ವಕಪ್ಗೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ ಕೆಎಲ್ ರಾಹುಲ್ಗೆ ಇಂದು 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
12ನೇ ಆವೃತ್ತಿಯಲ್ಲಿ ಪಂಜಾಬ್ ಪರ ಅಬ್ಬರಿಸುತ್ತಿರುವ ಕೆಎಲ್ ರಾಹುಲ್ 2019 ರ ವಿಶ್ವಕಪ್ಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಆಟಗಾರನಾಗಿದ್ದು, ಈ ಶುಭಸುದ್ದಿ ಹೊರಬಿದ್ದ ಬೆನ್ನಲ್ಲೇ ಇಂದು 27 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ರಾಹುಲ್ ಹುಟ್ಟುಹಬ್ಬಕ್ಕೆ ಟೀಮ್ ಇಂಡಿಯಾದ ಜೊತೆಗಾರ ಹಾರ್ದಿಕ್ ಪಾಂಡ್ಯ ಸಹಿತ ಕ್ರಿಸ್ ಗೇಲ್, ಶಿಖರ್ ಧವನ್, ಅಜಿಂಕ್ಯಾ ರಹಾನೆ ಸೇರಿದಂತೆ ಹಲವಾರು ಕ್ರಿಕೆಟಿಗರು ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಇನ್ನು ರಾಹುಲ್ ಜೊತೆ ಕಾಫಿ ವಿತ್ ಕರುಣ್ ಕಾರ್ಯಕ್ರಮಕ್ಕೆ ಭಾಗವಹಿಸಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೀಡಾಗಿದ್ದ ಹಾರ್ದಿಕ್ ಪಾಂಡ್ಯ 'ಏನೇ ಆದರೂ ನನ್ನ ಜೀವನದ ಸೋದರನನ್ನು ಅತೀವ ಇಷ್ಟಪಡುವುದಾಗಿ ತಿಳಿಸಿದ್ದು, ಈ ವರ್ಷವನ್ನು ನಮ್ಮ ವರ್ಷವನ್ನಾಗಿ ಮಾಡೋಣ ಎಂದು ಬರೆದುಕೊಂಡು, ಶುಭಾಶಯ ಕೋರಿದ್ದಾರೆ.
ಇನ್ನು ಪಂಜಾಬ್ ತಂಡ ಒಡತಿ ಪ್ರೀತಿ ಜಿಂಟಾ ನೀವು ನಮ್ಮ ತಂಡದಲ್ಲಿರುವುದು ನಮಗೆ ತುಂಬಾ ಖುಷಿಯಾಗಿದ್ದು, ನಿಮ್ಮ ವಿಶ್ವಕಪ್ ಪ್ರಯಾಣ ಉತ್ತಮವಾಗಿರಲಿ ಎಂದಿದ್ದಾರೆ. ಕ್ರಿಸ್ಗೇಲ್,ಅಗರ್ವಾಲ್ ಸೇರಿದಂತೆ ಇತರೆ ಆಟಗಾರರು ರಾಹುಲ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.