ಕರ್ನಾಟಕ

karnataka

ETV Bharat / briefs

6 ಹೊಲಿಗೆ ಹಾಕುವಂತ ಗಾಯದ ನಡುವೆಯೂ ಕೊನೆಯ ಓವರ್​ತನಕ ಬ್ಯಾಟಿಂಗ್​ ನಡೆಸಿದ ವಾಟ್ಸನ್​ - CSK

ಮುಂಬೈ ವಿರುದ್ಧದ ನಿನ್ನೆ ನಡೆದ ಫೈನಲ್​ ಐಪಿಎಲ್​ ಪಂದ್ಯದಲ್ಲಿ ಹೋರಾಡಿದ ವಾಟ್ಸನ್​ ಮಂಡಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರು ಲೆಕ್ಕಿಸದೆ ತಂಡಕ್ಕಾಗಿ ಆಡಿದ ಅವರ ಶ್ರದ್ದೆಯನ್ನು ಪ್ರತಿಯೊಬ್ಬ ಕ್ರಿಕೆಟ್​ ಆಟಗಾರ, ಅಭಿಮಾನಿ ಮೆಚ್ಚಲೇಬೇಕಿದೆ. ಜಂಟಲ್​ ಮ್ಯಾನ್  ಗೇಮ್​ ಎಂದು ಕರೆಸಿಕೊಳ್ಳುವ ಕ್ರಿಕೆಟ್​ನಲ್ಲಿ ವಾಟ್ಸನ್​ ನಿಜಕ್ಕೂ ಜಂಟಲ್​ ಮ್ಯಾನ್​ ಆಗಿ ಹೊರಹೊಮ್ಮಿದ್ದಾರೆ.

sg

By

Published : May 14, 2019, 5:36 AM IST

ಹೈದರಾಬಾದ್​: ಮಂಡಿಯಲ್ಲಿ ಗಾಯವಾಗಿ ರಕ್ತ ಸುರಿಯುತ್ತಿದ್ದರು ತಂಡದ ಗೆಲುವಿಗಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ ಸಿಎಸ್​ಕೆ ತಂಡ ಶೇನ್​ ವಾಟ್ಸನ್​​ ಅವರ ಕ್ರಿಕೆಟ್​ ಮೇಲಿನ ಶ್ರದ್ದೆ ಇಡೀ ಕ್ರಿಕೆಟ್​ ಜಗತ್ತಿಗೆ ಸ್ಪೂರ್ತಿಯಾಗಿ ನಿಂತಿದೆ.

ಹೌದು, ನಿನ್ನೆ ನಡೆದ ಮುಂಬೈ ವಿರುದ್ಧದ 12ನೇ ಆವೃತ್ತಿಯ ಫೈನಲ್​ನಲ್ಲಿ ಒಂದು ಕಡೆ ವಿಕೆಟ್​ ಉರುಳುತ್ತಿದ್ದರು ಹೆಬ್ಬಂಡೆಯಂತೆ ನಿಂತು ಏಕಾಂಗಿಯಾಗಿ ಹೋರಾಡಿದ ವಾಟ್ಸನ್​ ಮಂಡಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರು ಲೆಕ್ಕಿಸದೆ ತಂಡಕ್ಕಾಗಿ ಆಡಿದ ಅವರ ಶ್ರದ್ದೆಯನ್ನು ಪ್ರತಿಯೊಬ್ಬ ಕ್ರಿಕೆಟ್​ ಆಟಗಾರ, ಅಭಿಮಾನಿ ಮೆಚ್ಚಲೇಬೇಕಿದೆ. ಜಂಟಲ್​ ಮ್ಯಾನ್ ಗೇಮ್​ ಎಂದು ಕರೆಸಿಕೊಳ್ಳುವ ಕ್ರಿಕೆಟ್​ನಲ್ಲಿ ವಾಟ್ಸನ್​ ನಿಜಕ್ಕೂ ಜಂಟಲ್​ ಮ್ಯಾನ್​ ಆಗಿ ಹೊರಹೊಮ್ಮಿದ್ದಾರೆ.

ಹರ್ಭಜನ್​ ಸಿಂಗ್​ ಇನ್ಸ್ಟಗ್ರಾಮ್​ ಪೋಟೋ

ಮುಂಬೈ ನೀಡಿ150 ರನ್​ಗಳ ಸಾದಾರಣ ಮೊತ್ತ ಬೆನ್ನೆತ್ತಿದ ಸಿಎಸ್​ಕೆ ಕೇವಲ 1ರನ್​ ಇಂದ ಸೋಲನುಭವಿಸಿತ್ತು. ವಾಟ್ಸನ್​ 59 ಎಸೆತಗಳಲ್ಲಿ 80 ರನ್​ಗಳಿಸಿ ಕೊನೆಯ ಓವರ್​ನಲ್ಲಿ ರನ್​ಔಟ್​ ಆಗಿದ್ದರು. ಸಿಎಸ್​ಕೆ ಕೊನೆಯ ಓವರ್​ನಲ್ಲಿ 9 ರನ್​ಗಳಿಸಲಾಗದೆ ಕೇವಲ ಒಂದು ರನ್​ ಇಂದ ಸೋಲನುಭವಿಸಿ ನಿರಾಸೆಯನುಭವಿಸಿತು.

ಶೇನ್​ ವಾಟ್ಸನ್​

ಸಿಎಸ್​ಕೆಗೆ ಗೆಲುವಿಗಾಗಿ ಹೋರಾಟ ನಡೆಸಿದ ವಾಟ್ಸನ್​ ತಮ್ಮ ಮಂಡಿಯಿಂದ ರಕ್ತ ಸುರಿಯುತ್ತಿದ್ದರು ಬ್ಯಾಟಿಂಗ್​ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಚೆನ್ನೈ ತಂಡದ ಬೌಲರ್​ ಹರಭಜನ್​ ಸಿಂಗ್​ ರಿವೀಲ್​ ಮಾಡುವ ಮೂಲಕ ವಾಟ್ಸನ್​ಗಿರುವ ಕ್ರಿಕೆಟ್​ ಬಗೆಗಿನ ಶ್ರದ್ದೆಯನ್ನು ಕೊಂಡಾಡಿದ್ದಾರೆ. ವಾಟ್ಸನ್​ ಪಂದ್ಯದ ನಂತರ ಗಾಯಕ್ಕೆ 6 ಹೊಲಿಗೆ ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಭಜ್ಜಿ ತಮ್ಮ ಇನ್ಸ್ಟಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

ABOUT THE AUTHOR

...view details