ಕರ್ನಾಟಕ

karnataka

ETV Bharat / briefs

ಊಟ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು, ಆಸ್ಪತ್ರೆಗೆ ದಾಖಲು - ಆಸ್ಪತ್ರೆಗೆ ದಾಖಲು

ಹೊಸಪೇಟೆ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿನ್ನೆ ಊಟ ಮಾಡಿರುವ ವಿದ್ಯಾರ್ಥಿನಿಯರಲ್ಲಿ ವಾಂತಿ-ಬೇಧಿ ಕಾಣಿಸಿಕೊಂಡಿದೆ.

ಆಸ್ಪತ್ರೆಗೆ ದಾಖಲು

By

Published : May 7, 2019, 3:29 AM IST

ಆಸ್ಪತ್ರೆಗೆ ದಾಖಲು

ಬಳ್ಳಾರಿ:ಮಧ್ಯಾಹ್ನದ ಊಟ ಸೇವಿಸಿ, ಹಂಪಿ ವಿಶ್ವವಿದ್ಯಾಲಯದ ಬಿಸಿಎಂ ಹಾಸ್ಟೆಲ್​ನ ಹತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ತಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿದೆ.

ಹೊಸಪೇಟೆ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿನ್ನೆ ಊಟ ಮಾಡಿರುವ ವಿದ್ಯಾರ್ಥಿನಿಯರಲ್ಲಿ ವಾಂತಿ-ಬೇಧಿ ಕಾಣಿಸಿಕೊಂಡಿದೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಸ್ಥಳಕ್ಕೆ ಕುಲಪತಿ ಮತ್ತು ಕುಲಸಚಿವರು ಭೇಟಿ ನೀಡಿ ವಿಚಾರಣೆ ನಡೆಸಿದರು. ಇದರ ಮಧ್ಯೆ ಅನಾರೋಗ್ಯಕ್ಕೀಡಾದ ವಿದ್ಯಾರ್ಥಿನಿಯರನ್ನು ಹೊಸಪೇಟೆಯ ಸರ್ಕಾರಿ‌ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ವಾಂತಿಯಾಗಿದೆ ಎಂದು ವಿವಿಯ ಕುಲಪತಿ ಸ.ಚಿ ರಮೇಶ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿನ ವೈದ್ಯರ ಪರೀಕ್ಷೆ ನಂತರ ಏನಾಗಿದೆ ಎನ್ನುವ ಮಾಹಿತಿ ದೊರೆಯುತ್ತದೆ ಎಂದು ವಿವಿಯ ಕುಲಪತಿ ತಿಳಿಸಿದರು. ಸ್ಥಳಕ್ಕೆ ಹೊಸಪೇಟೆ ಚಿತ್ತವಾಡ್ಗಿ ಠಾಣೆಯ ಪೋಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಇನ್ನು ಊಟದಲ್ಲಿ ಹಲ್ಲಿ ಬಿದ್ದಿರಬಹುದು ಅಥವಾ ಯಾರಾದರೂ ಊಟದಲ್ಲಿ ಬೇರೆ ಏನಾದ್ರೂ ಮಿಶ್ರಣ ಮಾಡಿದ್ದರೇ ಎನ್ನುವ ಮಾಹಿತಿ ಹೊರಬರಬೇಕಾಗಿದೆ.

ABOUT THE AUTHOR

...view details