ಕರ್ನಾಟಕ

karnataka

ETV Bharat / briefs

ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ:19 ವಿದ್ಯಾರ್ಥಿಗಳ ಸಾವು,ಪ್ರಾಣ ರಕ್ಷಣೆಗೆ ಕಟ್ಟಡದಿಂದ ಜಿಗಿದ ಸ್ಟೂಡೆಂಟ್ಸ್​! - ಸಜೀವ ದಹನ

ಕಟ್ಟಡದಲ್ಲಿದ್ದ 50 ಮಕ್ಕಳ ರಕ್ಷಣೆ ಮಾಡಲಾಗಿದ್ದು,ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ

By

Published : May 24, 2019, 6:23 PM IST

Updated : May 24, 2019, 7:58 PM IST

ಸೂರತ್​:ಕೋಚಿಂಗ್​ ಸೆಂಟರ್​ಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಪರಿಣಾಮ 19ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಜೀವ ದಹನಗೊಂಡಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ.

ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಜೀವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಕಟ್ಟಡದಿಂದ ಹಾರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸ್ಥಳಕ್ಕೆ ಈಗಾಗಲೇ 18 ಆಗ್ನಿಶಾಮಕದಳ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ ಅನಾಹುತ

ಕಟ್ಟಡದಲ್ಲಿದ್ದ 50 ವಿದ್ಯಾರ್ಥಿಗಳ ರಕ್ಷಣೆ ಮಾಡಲಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಬೆಂಗಳೂರಿನ ಕಾರ್ಲ್‌ಟೌನ್​ ಕಟ್ಟಡದಲ್ಲಿ ಈ ಹಿಂದೆ ಇದೇ ರೀತಿಯ ಅಗ್ನಿ ಆಕಸ್ಮಿಕ ನಡೆದಿತ್ತು. ಅದನ್ನು ನೆನಪಿಸುವ ರೀತಿಯಲ್ಲಿ ಈ ದುರ್ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ವಿಜಯ್​ ರೂಪಾನಿ ತನಿಖೆಗೆ ಆದೇಶ ನೀಡಿದ್ದು, ಮೃತರ ಕುಟುಂಬಕ್ಕೆ 4ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಸೂರತ್​ ಪೊಲೀಸ್ಕ ಮಿಷರನ್​ ನೀಡಿರುವ ಮಾಹಿತಿ ಪ್ರಕಾರ ಘಟನೆಯಲ್ಲಿ 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದು, ಬೆಂಕಿ ಅನಾಹುತ ನಡೆದಿರುವುದು ನಿಜಕ್ಕೂ ದುರದೃಷ್ಟಕರ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ, ಗುಜರಾತ್​ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಾಯ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ರೂಪಾಣಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಣೆ ಮಾಡಿದ್ದಾರೆ. ಇತ್ತ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳ ಚಿಕಿತ್ಸೆಗಾಗಿ ದೆಹಲಿ ಏಮ್ಸ್​​ನಿಂದ ವೈದ್ಯರ ತಂಡ ಕರೆತರಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Last Updated : May 24, 2019, 7:58 PM IST

ABOUT THE AUTHOR

...view details