ಕೆನಡಾ: ಕೆನಡಾ ಕ್ರಿಕೆಟ್ ಅಸೋಸಿಯೇಷನ್ ಸಂಯೋಗದಲ್ಲಿ ಕಳೆದ ವರ್ಷ ನಡೆದಿದ್ದ ಚೊಚ್ಚಲ ಗ್ಲೋಬಲ್ ಟಿ-20 ಲೀಗ್ನ 2ನೇ ಆವೃತ್ತಿ ಜುಲೈ 25 ಆರಂಭಗೊಳ್ಳಲಿದೆ.
ಜುಲೈ 25 ರಂದು ಗ್ಲೋಬಲ್ ಟಿ-20 ಲೀಗ್ನ 2 ಆವೃತ್ತಿ ಆರಂಭ - ಗ್ಲೋಬಲ್ ಟಿ20 ಲೀಗ್
2018ರಲ್ಲಿ ನಡೆದಿದ್ದ ಮೊದಲ ಸೀಸನ್ನಲ್ಲಿ ಕ್ರಿಸ್‌ಗೇಲ್ ನೇತೃತ್ವದ ವಾನ್ಕೌವರ್ ನೈಟ್ಸ್ ತಂಡ ದೇಶಿ ಟೀಮ್ ಟೊರೆಂಟೋ ನ್ಯಾಶನಲ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಇದೀಗ 2ನೇ ಆವೃತ್ತಿಗೆ ಕೆನಡಾ ಸಿದ್ದವಾಗುತ್ತಿದೆ.
ಕಳೆದ ವರ್ಷ ನಡೆದಿದ್ದ ಮೊದಲ ಸೀಸನ್ನಲ್ಲಿ ಕ್ರಿಸ್ ಗೇಲ್ ನೇತೃತ್ವದ ವಾನ್ಕೌವರ್ ನೈಟ್ಸ್ ತಂಡ ದೇಶಿ ಟೀಮ್ ಟೊರೆಂಟೋ ನ್ಯಾಶನಲ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ಇಂದು 2ನೇ ಆವೃತ್ತಿಯ ಲೀಗ್ನ ದಿನಾಂಕವನ್ನು ಘೋಷಣೆ ಮಾಡಿದ ಕೆನಡಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಂಜಿತ್ ಸೈನಿ, 2ನೇ ಆವೃತ್ತಿಯ ಜಿಟಿ20 ಲೀಗ್ ಆರಂಭಕ್ಕಾಗಿ ಇಡೀ ಕೆನಡಾ ದೇಶ ಕಾದು ಕುಳಿತಿದೆ. ಈ ಲೀಗ್ನಿಂದ ಸ್ವದೇಶಿ ಆಟಗಾರರಿಗೆ ಹೆಚ್ಚಿನ ಕ್ರಿಕೆಟ್ ಆಡಲು ಅವಕಾಶಗಳು ಸಿಗುತ್ತವೆ. ಈ ಬಾರಿ ಮೊದಲ ಜಿಟಿ20 ಲೀಗ್ಗಿಂತಲೂ 2019ರ ಲೀಗ್ ಸ್ಮರಣಿಯವಾಗುವಂತೆ ಮಾಡುವುದಕ್ಕೆ ಆಟಗಾರರು ಹಾಗೂ ಕ್ರಿಕೆಟ್ ಕೆನಡಾ ಶ್ರಮಿಸಲಿದೆ ಎಂದಿದ್ದಾರೆ. ಮೂರು ಪ್ಲೇಆಫ್ ಸೇರಿದಂತೆ ಒಟ್ಟು 22 ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯ ಆಗಸ್ಟ್ 11 ರಂದು ನಡೆಯಲಿದೆ.