ಲಂಡನ್:ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಬಾಲ್ ವಿರೂಪಗೊಳಿಸಿದ ಶಿಕ್ಷೆಗೊಳಗಾಗಿ ಬರೋಬ್ಬರಿ 12 ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ವಿಶ್ವಕಪ್ ಆಡಲು ತಂಡಕ್ಕೆ ಮರಳಿದ್ದಾರೆ.
ಗೆಟ್ ಆಫ್,ಯು ಚೀಟ್: ಸ್ಮಿತ್, ವಾರ್ನರ್ ಕಾಲೆಳೆದ ಇಂಗ್ಲೆಂಡ್ ಕ್ರಿಕೆಟ್ ಫ್ಯಾನ್ಸ್!
ಬಾಲ್ ಟ್ಯಾಪರಿಂಗ್ ಆರೋಪದ ಮೇಲೆ ತಂಡದಿಂದ ನಿಷೇಧಕ್ಕೊಳಗಾಗಿದ್ದ ಸ್ಮಿತ್ ಹಾಗೂ ವಾರ್ನರ್ ಇದೀಗ ವಿಶ್ವಕಪ್ಗಾಗಿ ತಂಡ ಸೇರಿಕೊಂಡಿದ್ದು, ಇಂಗ್ಲೆಂಡ್ನಲ್ಲಿ ಇಬ್ಬರು ಆಟಗಾರರು ಕಸಿವಿಸಿ ಅನುಭವಿಸಿದ್ದಾರೆ.
ವಿಶ್ವಕಪ್ ಆರಂಭಕ್ಕೂ ಮುನ್ನ ಇಂದು ಆಸ್ಟ್ರೇಲಿಯಾ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಸ್ಥಳೀಯರಿಂದ ಇರಿಸು-ಮುರಿಸು ಅನುಭವಿಸುವಂತಾಯಿತು.
ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡಲು ಬರುತ್ತಿದ್ದಂತೆ ಪಂದ್ಯ ನೋಡಲು ಆಗಮಿಸಿದ್ದ ಕೆಲವರು ಗೆಟ್ ಆಫ್, ಯು ಚೀಟ್ ಎಂದು ಕೂಗಿದ್ದಾರೆ. ಇದರಿಂದ ವಾರ್ನರ್ ಕೆಲ ನಿಮಿಷಗಳ ಕಾಲ ಕಸಿವಿಸಿಗೊಂಡಿದ್ದಾರೆ. ಇದಾದ ಬಳಿಕ ಬ್ಯಾಟ್ ಬೀಸಿದ ವಾರ್ನರ್ 43ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸ್ಮಿತ್ ಭರ್ಜರಿ ಶತಕ ಸಿಡಿಸಿ ಮಿಂಚಿದರು.