ಮುಂಬೈ:ಬ್ಯಾಂಕ್ಗಳಿಂದ ಆರ್ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಸಿಸ್ಟಮ್)ಹಾಗೂ ನೆಫ್ಟ್ (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್) ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ.
ಜುಲೈ 1ರಿಂದ ಈ ಸೇವೆಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಹಣ ಪಾವತಿ ಇಲ್ಲದೆ ಗ್ರಾಹಕರು ಹಣ ವರ್ಗಾಯಿಸಬಹುದಾಗಿದೆ. ಇಷ್ಟು ದಿನ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವುದರ ಮೇಲೆ ರೂ 1ರಿಂದ 5ರೂ ವರೆಗೆ ಹಾಗೂ ಆರ್ಟಿಜಿಎಸ್ ಮೇಲೆ ರೂ 5ರಿಂದ 50 ರೂವರೆಗೆ ಹೆಚ್ಚುವರಿ ಶುಲ್ಕ ಹಾಕಲಾಗುತ್ತಿತ್ತು. ಇದೀಗ ಈ ಸೆೇವೆಯನ್ನು ಶುಲ್ಕಮುಕ್ತ ಮಾಡಲಾಗಿದೆ.