ಚೆನ್ನೈ: ಮುಂಬೈ ಇಂಡಿಯನ್ಸ್ ನೀಡಿದ್ದ 150ರನ್ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಕೊನೆಯ ಓವರ್ನಲ್ಲಿ ಗೆಲುವಿಗೆ ಬೇಕಾಗಿದ್ದು ಕೇವಲ 9ರನ್. ಈ ಟಾರ್ಗೆಟ್ ಸಿಎಸ್ಕೆ ಸುಲಭವಾಗಿ ಮುಟ್ಟಬಲ್ಲದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ಲೆಕ್ಕಾಚಾರವನ್ನ ತಲೆಕೆಳಗೆ ಮಾಡಿದ್ದು ಮಾತ್ರ ಲಸಿಂತ್ ಮಲಿಂಗಾ.
ತಾವು ಎಸೆದ ಕೊನೆಯ ಓವರ್ನಲ್ಲಿ ಕೇವಲ 7ರನ್ ನೀಡಿ ಮುಂಬೈ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕುವಂತೆ ಮಾಡಿರುವ ಲಸಿಂತ್ ಮಲಿಂಗಾಗೆ ಕೊನೆ ಓವರ್ ನೀಡಿದ್ದರ ಹಿಂದಿನ ರಹಸ್ಯವನ್ನ ಕ್ಯಾಪ್ಟನ್ ರೋಹಿತ್ ರಿವಿಲ್ ಮಾಡಿದ್ದಾರೆ.
ರೋಹಿತ್ ಶರ್ಮಾ ಕೊನೆಯ ಓವರ್ ಎಸೆಯುವುದಕ್ಕೂ ಮುನ್ನ ಮೂರು ಓವರ್ಗಳಲ್ಲಿ 42ರನ್ ನೀಡಿ ದುಬಾರಿ ಅನಿಸಿಕೊಂಡಿದ್ದರು. ಜತೆಗೆ ಒಂದೇ ಓವರ್ನಲ್ಲಿ ಬರೋಬ್ಬರಿ 20ರನ್ ನೀಡಿ ಕ್ಯಾಪ್ಟನ್ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಮಧ್ಯೆ ಕೂಡ ಅವರಿಗೆ ಕೊನೆಯ ಓವರ್ ನೀಡಿದಾಗ ಕ್ರೀಡಾಭಿಮಾನಿಗಳು ಕೆಲ ನಿಮಿಷ ಆಶ್ಚರ್ಯಕ್ಕೊಳಗಾಗಿದ್ದರು. ಕಾರಣ ಮಲಿಂಗಾ ಸುಲಭವಾಗಿ ರನ್ ಬಿಟ್ಟುಕೊಡ್ತಾರೆಂಬ ಅನುಮಾನ ಎಲ್ಲರಲ್ಲೂಆಗಲೇ ಶುರುವಾಗಿತ್ತು.