ಕರ್ನಾಟಕ

karnataka

ETV Bharat / briefs

ನಟ ಅಜಯ್​ ದೇವಗನ್​ ತಂದೆ ವೀರು ದೇವಗನ್​ ವಿಧಿವಶ - ವೀರು ದೇವಗನ್

ಬಾಲಿವುಡ್​ ಹಿರಿಯ ನಟ ಅಜಯ್​ ದೇವಗನ್​ ತಂದೆ ವೀರು ದೇವಗನ್ ವಿಧಿವಶರಾಗಿದ್ದಾರೆ.

ವೀರು ದೇವಗನ್​ ವಿಧಿವಶ

By

Published : May 27, 2019, 3:28 PM IST

ಮುಂಬೈ: ಬಾಲಿವುಡ್​ ನಟ ಅಜಯ್​ ದೇವಗನ್​​ ತಂದೆ ಹಾಗೂ ಸ್ಟಂಟ್​ ಮಾಸ್ಟರ್​​ ವೀರು ದೇವಗನ್​ ವಿಧಿವಶರಾಗಿದ್ದಾಗಿ ತಿಳಿದು ಬಂದಿದೆ.

ಮುಂಬೈ ಸಾಂತಾಕ್ರೂಸ್‌ನ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 1980ರ ಅವಧಿಯಲ್ಲಿ ನಟ ಅಜಯ್ ದೇವಗನ್, ಅಮಿತಾಬ್ ಬಚ್ಚನ್, ಮನಿಷಾ ಕೋಯಿರಾಲ ಮತ್ತು ಸುಷ್ಮಿತಾ ಸೇನ್ ನಟನೆಯ 'ಹಿಂದೂಸ್ಥಾನ್ ಕಿ ಕಸಮ್' (1999) ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಿತರಾಗಿದ್ದರು.

ನಿರ್ದೇಶಕರಾಗಿ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ಸನ್ನಿವೇಶಗಳನ್ನು ನಿರ್ದೇಶಿಸಿರುವ ಹಿರಿಮೆ ಇವರಿಗೆ ಸಲ್ಲುತ್ತದೆ. ವೀರು ದೇವಗನ್​ ಪ್ರಮುಖವಾಗಿ ದಿಲ್‍ವಾಲೆ (1994), ಹಿಮ್ಮತ್‌ವಾಲಾ (1983), ಶಹನ್‌ಶಾಹ್ (1988) ಚಿತ್ರಗಳು ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರಮುಖ ಸಿನಿಮಾಗಳು.

ವೀರು ದೇವಗನ್​ ಅವರ ಸಾವಿಗೆ ಬಾಲಿವುಡ್​ ಕಂಬನಿ ಮಿಡಿದಿದ್ದು, ಇಂದು ಸಂಜೆ ಆರು ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details